ಟೆಹರಾನ್: ಯುದ್ಧದ ಸಮಯದಲ್ಲಿ ಇರಾನ್ ಹೊಸ ವಾಯು ರಕ್ಷಣಾ ಮಾದರಿಯನ್ನು ಅಭಿವೃದ್ಧಿಪಡಿಸಿ ಅಳವಡಿಸಿಕೊಂಡಿದೆ ಎಂದು ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಪ್ರತಿಪಾದಿಸಿದೆ.
ದೇಶವು ಯುದ್ಧದ ಸಮಯದಲ್ಲಿ ತನ್ನ ಕಮಾಂಡ್ ಮತ್ತು ಕಂಟ್ರೋಲ್ ನೆಟ್‍ವರ್ಕ್, ತರಬೇತಿ ವಿಧಾನಗಳು ಮತ್ತು ಕಾರ್ಯಾಚರಣೆಯ ತಂತ್ರಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಐಆರ್‌ಜಿಸಿ ಅಧಿಕಾರಿ ಹೇಳಿದ್ದಾರೆ.
ಹಿಂದಿನ ಯುದ್ಧಗಳಿಂದ ಕಲಿತ ಪಾಠಗಳಿಂದಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಈ ಸಮಗ್ರ ಬದಲಾವಣೆಯು ಸಾಂಪ್ರದಾಯಿಕ ವಾಯು ರಕ್ಷಣಾ ಮಾದರಿಯಿಂದ ದೂರ ಸರಿದಿರುವುದನ್ನು ಸೂಚಿಸುತ್ತದೆ ಎಂದು ಇರಾನ್‍ನ `ಫಾರ್ಸ್' ಸುದ್ದಿಸಂಸ್ಥೆ ವರದಿ ಮಾಡಿದೆ.

