ಕಾಸರಗೋಡು: ಹೊಸದುರ್ಗ ಪೋಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯರನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ಇಬ್ಬರನ್ನು ಬಂಧಿಸಿ, ಇವರ ವಿರುದ್ಧ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರ ನಿವಾಸಿಗಳಾದ ರಿಜ್ವಾನ್ (23) ಮತ್ತು ಮೊಹಮ್ಮದ್ ಸಾದ್ (19)ಬಂಧಿತರು. ಹೊಸದುರ್ಗ ಠಾಣೆ ಇನ್ಸ್ಪೆಕ್ಟರ್ ಕೆ. ದಿನೇಶನ್ ನೇತೃಥ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ 11 ಮತ್ತು 14 ಹರೆಯದ ಸಹೋದರಿಯರನ್ನು ಆರೋಪಿಗಳು, ಆಗಸ್ಟ್ 15 ರಂದು ಉಳ್ಳಾಲಕ್ಕೆ ಕರೆದೊಯ್ದು ಕೃತ್ಯವೆಸಗಿದ್ದಾರೆ.
ಬಾಲಕಿಯರಿಬ್ಬರೂ ಸ್ನೇಹಿತೆಯ ಮನೆಗೆ ತೆರಳುವುದಾಗಿ ತಮ್ಮ ಮನೆಯಿಂದ ಹೊರಟಿದ್ದರು. ರಿಜ್ವಾನ್ ಮತ್ತು ಮೊಹಮ್ಮದ್ ಇಬ್ಬರನ್ನೂ ಕಾರಿನಲ್ಲಿ ಉಳ್ಳಾಲ ಸನಿಹದ ವಸತಿಗೃಹವೊಂದಕ್ಕೆ ಕರೆದೊಯ್ದು, ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಕ್ಕಳಿಬ್ಬರು ನಾಪತ್ತೆಯಾಗಿರುವ ಬಗ್ಗೆ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಸಿದಾಗ ತಲಪಾಡಿ ಆಸುಪಾಸು ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ. ಪೆÇಲೀಸರು ಬಾಲಕಿಯರಿಬ್ಬರಿಂದ ಹೇಳಿಕೆ ದಾಖಲಿಸಿಕೊಳ್ಳುವ ಮಧ್ಯೆ ದೌರ್ಜನ್ಯದ ಮಾಹಿತಿ ಲಭಿಸಿದೆ.

