HEALTH TIPS

ಪಾಕ್‌ ಉಗ್ರ ಸಂಘಟನೆ ಜತೆಗೆ ನಂಟಿನ ಶಂಕೆ: ವ್ಯಕ್ತಿ ಬಂಧನ

ಗುವಾಹಟಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ 'ಶಹಜಾದ್‌ ಭಟ್ಟಿ ನೆಟ್‌ವರ್ಕ್‌' (ಎಸ್‌ಬಿಎನ್‌) ಪರವಾಗಿ ಕೆಲಸ ಮಾಡುತ್ತಿದ್ದ 21 ವರ್ಷದ ಶಂಕಿತ ವ್ಯಕ್ತಿಯನ್ನು ಹೈಲಾಕಾಂಡಿಯಲ್ಲಿ ಅಸ್ಸಾಂ ಪೊಲೀಸ್‌ ವಿಶೇಷ ಕಾರ್ಯಪಡೆ ಬುಧವಾರ ಬಂಧಿಸಿದೆ.


ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಮೂವರನ್ನು ವಿಶೇಷ ಕಾರ್ಯಪಡೆ ಜುಲೈ 25ರಂದು ಬಂಧಿಸಿತ್ತು.

ಬಂಧಿತರಿಂದ ಪಡೆದ ಮಾಹಿತಿ ಆಧರಿಸಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತನ ಬಳಿ ಇದ್ದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಹೇಳಿಕೆಯ ಪ್ರಕಾರ, ಭಾರತದಾದ್ಯಂತ ನಡೆದ ಕೆಲವು ಗ್ರೆನೇಡ್, ಪೆಟ್ರೋಲ್ ಬಾಂಬ್ ದಾಳಿ ಮತ್ತು ಉದ್ದೇಶಿತ ಹತ್ಯೆಗಳೊಂದಿಗೆ ಶಹಜಾದ್ ಭಟ್ಟಿ ನೆಟ್‌ವರ್ಕ್ ನಂಟು ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries