HEALTH TIPS

ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ಸಚಿವರು


ಕುಂಬಳೆ
: ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ಮತ್ತು 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಡಿಜಿಟಲ್ ಸ್ಕ್ವೇರ್ ಯೋಜನೆಯ ರಾಜ್ಯಮಟ್ಟದ ಉದ್ಘಾಟನೆಯನ್ನು ಶಿಕ್ಷಣ ಸಚಿವ ವಕೀಲ ಎನ್. ಶಂಸುದ್ದೀನ್ ನೆರವೇರಿಸಿದರು.


ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಮುಖ್ಯ ಅತಿಥಿಗಳಾಗಿದ್ದರು. ಕುಂಬಳೆ ಪಂಚಾಯತಿ ಸಹಾಯಕ ಅಭಿಯಂತ ಮುಹಮ್ಮದ್ ಶಿಹಾಬ್ ವರದಿ ಮಂಡಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಾಬು ಅಬ್ರಹಾಂ, ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲ ಕುಂಞÂ ಚೆರ್ಕಳ, ಕುಂಬಳೆ ಪಂಚಾಯತಿ ಉಪಾಧ್ಯಕ್ಷೆ ಬಲ್ಕೀಸ್, ಜಿಲ್ಲಾ ಪಂಚಾಯತಿ ಸದಸ್ಯ ಅಜೀಜ್ ಕಳತ್ತೂರ್, ಕಾಸರಗೋಡು ಬ್ಲಾಕ್ ಪಂಚಾಯತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕುಂಬಳೆ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎ.ಕೆ. ಆರೀಫ್, ಇನಾಸ್ ಫವಾಝ್, ಬ್ಲಾಕ್ ಪಂಚಾಯತಿ ಸದಸ್ಯ ಪೃಥ್ವಿರಾಜ್ ಜಗನ್ನಾಥ ಶೆಟ್ಟಿ, ನಸೀಮಾ, ಪಂಚಾಯತಿ ಸದಸ್ಯ ಹಮೀದ್ ಕೊಯಿಪ್ಪಾಡಿ, ಕುಂಬಳೆ ಎಇಒ ಎಂ.ಅಶೋಕ, ಕಾಸರಗೋಡು ಎಇಒ ಶಶಿಧರ ಎಂ, ಕುಂಬಳೆ ಜಿಎಚ್‍ಎಸ್‍ಎಸ್ ಪ್ರಾಂಶುಪಾಲೆ ಸಿಂಧು, ಕುಂಬಳೆ ಬಿಪಿಸಿ ಶೀನ, ಕುಂಬಳೆ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಜಾ, ಪಿಟಿಎ ಅಧ್ಯಕ್ಷೆ ಸಾಮಮ್ಮ ಪ್ರಸಾದ್, ಪಿಟಿಎ ಅಧ್ಯಕ್ಷ ಪ್ರಸಾದ್ ಕುಮಾರ್, ಜಿಎಸ್ ಬಿಎಸ್ ಪಿಟಿಎ ಅಧ್ಯಕ್ಷ ಮೊಯ್ದೀನ್ ಅಝೀಝ್, ನೌಕರ ಸಂಘದ ಕಾರ್ಯದರ್ಶಿ ಕೆ.ದೀಪಾ, ರಾಜಕೀಯ ಪಕ್ಷದ ಮುಖಂಡರಾದ ಮುಹಮ್ಮದಲಿ, ಸುಬೈರ್, ಸಿ.ಸತ್ತಾರ್ ಆರಿಕ್ಕಾಡಿ, ಸವಾದ್ ತಾಜ್, ಕೃಷ್ಣ ಗಟ್ಟಿ ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಮಿತಿ ಸಂಚಾಲಕಿ ಪ್ರಸೂತಿ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಸ್ವಾಗತಿಸಿ, ಜಿ.ಎಸ್.ಬಿ.ಎಸ್ ಮುಖ್ಯೋಪಾಧ್ಯಾಯ ವಿಜಯಕುಮಾರ್ ವಾವಳ ವಂದಿಸಿದರು.


 4 ಕೋಟಿ ರೂ.ವೆಚ್ಚದಲ್ಲಿ ಮೂರು ಮಹಡಿಗಳಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಕಿಪ್ಭಿ-ಕಿಲಾ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ 18 ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. 1913 ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ 33 ವಿಭಾಗಗಳಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries