HEALTH TIPS

ಗುರುವಾಯೂರಪ್ಪನಿಗೆ ಹೊಸ ಎಲೆಕ್ಟ್ರಿಕ್ ಆಟೋ ಪ್ರದಾನಗೈದ ಮಹೀಂದ್ರಾ

ಗುರುವಾಯೂರ್: ಗುರುವಾಯೂರಪ್ಪನಿಗೆ ಪ್ರಮುಖ ಆಟೋ ತಯಾರಕ ಮಹೀಂದ್ರಾ ಹೊಸ ಮಾದರಿಯ ಎಲೆಕ್ಟ್ರಿಕ್ ಆಟೋವನ್ನು ಕಾಣಿಕೆಯಾಗಿ ನೀಡಿತು. ದೇವಾಲಯದ ಪೂರ್ವ ಗೋಪುರದಲ್ಲಿ ನಡೆದ ಸಮಾರಂಭದಲ್ಲಿ ದೇವಸ್ವಂ ಅಧ್ಯಕ್ಷ ಎ ವಿ ಗೋಪಿನಾಥ್ ಅವರಿಗೆ ಆಟೋದ ಕೀಲಿಗಳು ಮತ್ತು ದಾಖಲೆಗಳನ್ನು ಹಸ್ತಾಂತರಿಸಲಾಯಿತು. 


ಒಂದೇ ಚಾರ್ಜ್‍ನಲ್ಲಿ ಆಟೋ 200 ಕಿ.ಮೀ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆರು ವರ್ಷಗಳ ವಾರಂಟಿ ಇದೆ.

ಸಮಾರಂಭದಲ್ಲಿ ದೇವಸ್ವಂ ಆಡಳಿತ ಮಂಡಳಿ ಸದಸ್ಯ ಸಿ ಮನೋಜ್, ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಕಾರ್ಪೋರೇಟ್ ಸೇಲ್ಸ್ ಹೆಡ್ ಗಣೇಶ್, ಭಾರತ್ ಮೋಟಾರ್ ಎಂಡಿ ಅಶೋಕ್ ಕುಮಾರ್, ದೇವಸ್ವಂ ಪರ್ಚೇಸ್ ಡಿಎ ಕೆ ಎಸ್ ಮಾಯಾದೇವಿ, ವ್ಯವಸ್ಥಾಪಕರು ಕೆ ಎಂ ವಿನೋದನ್, ಕೆ ಜಿ ಸುರೇಶ್ ಕುಮಾರ್, ದೇವಾಲಯದ ಸಹಾಯಕ ವ್ಯವಸ್ಥಾಪಕರು ಎ ವಿ ಪ್ರಶಾಂತ್, ಸಿ ಆರ್ ಲೆಜುಮೋಲ್ ಮತ್ತು ವಾಹನ ಮೇಲ್ವಿಚಾರಕ ಸತೀಶನ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು, ಮಹೀಂದ್ರಾದ ಎಕ್ಸ್‍ಯುವಿ 700 ಮತ್ತು ಲಿಮಿಟೆಡ್ ಎಡಿಷನ್ ಥಾರ್ ಅನ್ನು ದೇವಾಲಯಕ್ಕೆ ಸಮರ್ಪಿಸಲಾಗಿತ್ತು. ಮಹೀಂದ್ರಾ ಟ್ರಿಯೊ ಪ್ಲಸ್ ಆಟೋವನ್ನು ಗುರುವಾಯೂರಪ್ಪನಿಗೆ ಸಮರ್ಪಿಸಲಾಗಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries