ಕುಂಬಳೆ: ರಂಗ ಡಿಂಡಿಮ ಸಾಂಸ್ಕøತಿಕ-ಸಾಹಿತ್ಯ ಸಂಘ ಕಾಸರಗೋಡು ನೇತೃತ್ವದಲ್ಲಿ ಇಂದು ಬೆಳಿಗ್ಗೆ 9.30 ರಿಂದ ಜಿಲದಲಾ ಮಟ್ಟದ ರಂಗಭೂಮಿ ಕಾರ್ಯಾಗಾರ-2026 ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಆಯೋಜಿಸಲಾಗಿದೆ.
ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಾಗಾರವನ್ನು ಸಾಹಿತಿ, ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಉದ್ಘಾಟಿಸುವರು. ನಿವೃತ್ತ ಶಿಕ್ಷಕಿ ಪ್ರಭಾವತಿ ಕೆದಿಲಾಯ ಮುಖ್ಯ ಅತಿಥಿಗಳಾಗಿರುವರು. ಅಶೋಕ್ ಕೊಡ್ಲಮೊಗರು ಉಪಸ್ಥಿತರಿರುವರು. ಎ.ಬಿ.ಮಧುಸೂದನ ಬಲ್ಲಾಳ್, ಜಯ ಮಣಿಯಂಪಾರೆ, ಎಂ.ನಾ. ಚಂಬಲ್ತಿಮಾರ್, ಶಶಿ ಕುಳೂರು, ಸಾವಿತ್ರಿ ಟೀಚರ್ ತರಗತಿ ನಡೆಸುವರು.
ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ರಂಗನಟ ರವೀಂದ್ರ ರೈ ಮಲ್ಲಾವರ ಮುಖ್ಯ ಅತಿಥಿಗಳಾಗಿರುವರು. ದಯಾನಂದ ರೈ ಕಳ್ವಾಜೆ, ಅಖಿಲೇಶ್ ನಗುಮುಗಂ, ಶ್ರೀಧರ ಪುಣಿಯೂರು, ಶಶಿಧರ ಎದ್ರುತ್ತೋಡು, ಕಿರಣ್ ಕಲಾಂಜಲಿ, ಪುರುಷೋತ್ತಮ ಭಟ್.ಕೆ, ವಿಖ್ಯಾತ್ ಬಾಡೂರು ಉಪಸ್ಥಿತರಿರುವರು.



