ತ್ರಿಶೂರ್: ತ್ರಿಶೂರ್ ಕಾರ್ಪೋರೇಷನ್‍ನಲ್ಲಿ ರಾಷ್ಟ್ರಗೀತೆ ಹಾಡಲು ಅಡ್ಡಿಪಡಿಸಲಾಯಿತು ಎಂದು ಆರೋಪಿಸಿ ಬಿಜೆಪಿ ಕೌನ್ಸಿಲರ್‍ಗಳು ದೂರು ದಾಖಲಿಸಿದ್ದಾರೆ.
ಬಿಜೆಪಿಯು ತ್ರಿಶೂರ್ ನಗರ ಪೋಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಕಾರ್ಪೋರೇಷನ್ ಮೇಯರ್ ಮತ್ತು ಉಪಮೇಯರ್ ರಾಷ್ಟ್ರಗೀತೆಗೆ ಅಗೌರವ ತೋರಿ ಹಾಡಲು ಅಡೆತಡೆಗಳನ್ನು ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಬಿಜೆಪಿ ಕೌನ್ಸಿಲರ್‍ಗಳು ವಂದೇ ಮಾತರಂ ಹಾಡುತ್ತಿದ್ದಾಗ, ಅವರು ಸಮಾರಂಭದಿಂದ ಹಿಂದೆ ಸರಿದರು ಮತ್ತು ಅವರ ಮೈಕ್ರೊ ಪೋನ್‍ನಲ್ಲಿ ಮಾತನಾಡಿದರು ಎಂದು ದೂರಿನಲ್ಲಿ ಹೇಳಲಾಗಿದೆ.

