HEALTH TIPS

ಮಹಾರಾಷ್ಟ್ರದ ಶಾಲೆಯಲ್ಲಿ ಅವಧಿ ಮೀರಿದ ಆಹಾರ: ಸಿಜೆಪಿ ತಪಾಸಣೆ ವೇಳೆ ಬೆಳಕಿಗೆ

ಹಿಂಗೋಲಿ: ಸಿಜೆಪಿಯ 'ಸ್ಕೂಲ್ ಠೀಕ್ ಕರ್‌ದೊ' ಅಭಿಯಾನದ ಭಾಗವಾಗಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ತಮ್ಮ ತವರು ಜಿಲ್ಲೆ ಹಿಂಗೋಲಿಯ ಅವುಂದಾದ ಸರ್ಕಾರಿ ಶಾಲೆಗೆ ಭೇಟಿ ಇತ್ತರು. ಈ ವೇಳೆ ಶಾಲೆಯಲ್ಲಿ ಅವಧಿ ಮೀರಿದ ಆಹಾರ ಪೊಟ್ಟಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. 


ಕೆಟ್ಟು ಹೋದ ವಾಟರ್ ಫಿಲ್ಟರ್ ಹಾಗೂ ಶೌಚಗೃಹಗಳಲ್ಲಿ ನೀರಿನ ಪೂರೈಕೆ ಇಲ್ಲದಿರುವುದನ್ನೂ ಅವರು ಗಮನಿಸಿದರು.

ವಿದ್ಯಾರ್ಥಿಗಳಿಗೆ ನೀಡಲು ಶಾಲೆಯಲ್ಲಿ ಸಂಗ್ರಹಿಸಲಾಗಿದ್ದ ಆಹಾರದ ಪೊಟ್ಟಣಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ಅವರು, ಅವುಗಳ ಅವಧಿ ಫೆಬ್ರುವರಿಗೆ ಮುಗಿದಿದೆ ಎಂದಿದ್ದಾರೆ.

'ಫೆಬ್ರುವರಿಯಲ್ಲಿ ಅವಧಿ ಮುಗಿದಿರುವ ಪೊಟ್ಟಣಗಳಿಂದ ವಿದ್ಯಾರ್ಥಿಗಳ ಆಹಾರ ತಯಾರಿಸಲಾಗುತ್ತಿದೆ. ಈಗ ಸೆಪ್ಟೆಂಬರ್ ಆಗಮಿಸುತ್ತಿದೆ. ಇದೇ ಪೊಟ್ಟಣದಿಂದ ಸಚಿವರ ಮಕ್ಕಳಿಗೆ ಸಿಬ್ಬಂದಿ ಆಹಾರ ನೀಡುವರೇ? ಬಡ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುವಿರೇ?' ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.

ಶಾಲೆಯ ಓವರ್‌ಹೆಡ್‌ ಟ್ಯಾಂಕ್‌ ತಪಾಸಣೆ ಮಾಡಿದ ಅವರು, ಅದರಲ್ಲಿರುವ ನೀರನ್ನೂ ಪರಿಶೀಲಿಸಿದರು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಯ ಜೊತೆಯೂ ಮಾತುಕತೆ ನಡೆಸಿದರು.

'ಅವಧಿ ಮೀರಿದ ಆಹಾರವನ್ನೇ ಆರು ತಿಂಗಳಿನಿಂದ ಬಳಕೆ ಮಾಡಲಾಗುತ್ತಿದೆ. ಫಿಲ್ಟರ್ ಇದ್ದರೂ, ಅದು ಹಾಳಾಗಿದ್ದರಿಂದ ವಿದ್ಯಾರ್ಥಿಗಳು ಕೊಳವೆಬಾವಿ ನೀರನ್ನು ಕುಡಿಯುತ್ತಿದ್ದಾರೆ. ಶೌಚಗೃಹದಲ್ಲಿ ನೀರೇ ಇಲ್ಲ' ಎಂದು ಸಂಬಂಧಪಟ್ಟ ಅಧಿಕಾರಿಗೆ ಅವರು ಫೋನ್ ಮೂಲಕ ತಿಳಿಸಿದರು.

ವಿದ್ಯಾರ್ಥಿಗಳನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.

ನಾಲ್ಕನೇ ತರಗತಿವರೆಗೆ ಇರುವ ಶಾಲೆಯಲ್ಲಿ ಕೇವಲ ಎರಡು ಕೋಣೆಗಳಿದ್ದು, 87 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದರು.

ಸಿಜೆಪಿ ವತಿಯಿಂದ ಆಗಸ್ಟ್ 15ರಿಂದ ಈ ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯನ್ನು ಗುರುತಿಸುವುದು ಹಾಗೂ ಸರ್ಕಾರವನ್ನು ಹೊಣೆಗಾರನನ್ನಾಗಿ ಮಾಡುವುದು ಅದರ ಉದ್ದೇಶ.


Expired food items are being used to feed children in Govt Schools. Would those sitting in power feed the same food to their own children? And if exposing this means FIRs against us, then please do. We won’t stop exposing the truth.


अभिजीत दीपके ने सरकारी स्कूलों के पानी की टंकी की वर्तमान स्थिति को चेक किया, बच्चों के लिए अच्छे व साफ पानी का इंतजार होना चाहिए। जुड़े: @CJP_for_India #SchoolThikKaro


















ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries