ವಾಷಿಂಗ್ಟನ್ (AFP): 'ಹೊರ್ಮುಜ್ ಜಲಸಂಧಿಯ ಮೇಲೆ ಅಮೆರಿಕವು ಸಂಪೂರ್ಣ ನಿಯಂತ್ರಣ ಹೊಂದಿದ್ದು, ಅದನ್ನು ಮುಂದೆಯೂ ಉಳಿಸಿಕೊಳ್ಳುತ್ತದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ರೂಥ್ ಸೋಷಿಯಲ್‌ನಲ್ಲಿ ಬುಧವಾರ ಪೋಸ್ಟ್ ಮಾಡಿರುವ ಅವರು, 'ಇರಾನ್ ಬಂದರಿನ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನವನ್ನು ಎಲ್ಲರೂ ಉಕ್ಕಿನ ಗೋಡೆ ಎಂದು ಕರೆಯುತ್ತಿದ್ದಾರೆ.
ಇರಾನ್‌ಗೆ ಇದರ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ. ಇರಾನ್‌ಗೆ ಹೊರ್ಮುಜ್ ಮೇಲೆ ಯಾವುದೇ ನಿಯಂತ್ರಣವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

