ಮುಂಬೈ: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಮಾತಾ ಸಾಹಿಬ್ ಗುರುದ್ವಾರದ ಬಳಿ ಹಲ್ಲೆ ನಡೆಸಲಾಗಿದೆ.
ಗುರುದ್ವಾರದ ಬಳಿಯೇ ಬಾದಲ್ ಮೇಲೆ ಚೂಪಾದ ಆಯುಧದಿಂದ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಬಳಿಕ ಬಾದಲ್ ತಮ್ಮ ಬಲಗೈಗೆ ಬಟ್ಟೆ ಕಟ್ಟಿಕೊಂಡು ಕಟ್ಟಡದ ಒಳಗೆ ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಬೆಳಿಗ್ಗೆ ಬಾದಲ್ ಅವರು ಪತ್ನಿ ಹರ್‌ಸಿಮ್ರತ್ ಕೌರ್ ಬಾದಲ್ ಸಮೇತರಾಗಿ ನಾಂದೇಡ್‌ನ ತಖ್ತ್ ಶ್ರೀ ಹಜೂರ್ ಸಾಹಿಬ್‌ಗೆ ಭೇಟಿ ನೀಡಿದ್ದರು.

