HEALTH TIPS

ಗಡಿಯಲ್ಲಿ ಪಾಕ್‌ ಪ್ರಜೆ ಸೇರಿ ಇಬ್ಬರ ಬಂಧನ

ಕೋಲ್ಕತ್ತ (PTI): ಭಾರತ- ಬಾಂಗ್ಲಾದೇಶದ ಗಡಿಯಲ್ಲಿ ಪಾಕಿಸ್ತಾನದ ಪ್ರಜೆ ಸೇರಿದಂತೆ ಇಬ್ಬರನ್ನು ಪಶ್ಚಿಮ ಬಂಗಾಳದ ವಿಶೇಷ ತನಿಖಾ ತಂಡ (ಎಸ್‌ಟಿಎಫ್‌) ಬಂಧಿಸಿದೆ. 


ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ರಾಣಾ ರೌಫ್‌ ವಹಾಬ್‌ ಆಲಂನನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.

ತನ್ನ ದೇಶದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ರೌಫ್‌ಗೆ ನಂಟಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ರೌಫ್‌ ಜೊತೆ ನೇರ ಸಂಪರ್ಕ ಹೊಂದಿದ್ದ ಮತ್ತು ಆತನಿಗೆ ಭಾರತೀಯ ಗುರುತಿನ ಚೀಟಿ ಮಾಡಿಸಿಕೊಡಲು ಸಹಾಯ ಮಾಡಿದ್ದ ಕೋಲ್ಕತ್ತದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಭಾರತೀಯ ರೈಲ್ವೆ ಮತ್ತು ನೌಕಾಪಡೆಗೆ ಸಂಬಂಧಿಸಿದ ಮಾಹಿತಿಗಳನ್ನು ರೌಫ್‌, ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. ಅವನು ಯಾವ ರೀತಿ ಮಾಹಿತಿ ಸಂಗ್ರಹಿಸುತ್ತಿದ್ದ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ನೇಪಾಳದ ಮೂಲಕ ಆತ 2012ರಲ್ಲಿ ಭಾರತವನ್ನು ಪ್ರವೇಶಿಸಿ, ಪಶ್ಚಿಮ ಬಂಗಾಳದಲ್ಲಿ ನೆಲಸಿದ್ದ. ಅವನ ಬಳಿ ದೊರೆತ ಆಧಾರ್‌ ಕಾರ್ಡ್‌ನಲ್ಲಿ ಕೋಲ್ಕತ್ತದ ಟಾಪ್ಸಿಯಾ ಪ್ರದೇಶದ ವಿಳಾಸವಿದೆ ಎಂದು ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries