HEALTH TIPS

ಕೆಟ್ಟುಹೋದ ಹೈಮಾಸ್ಟ್ ದೀಪ: ಕತ್ತಲಾವರಿಸಿ ಬಾಯಾರುಪದವುನಲ್ಲಿ ಸಮಸ್ಯೆ

ಉಪ್ಪಳ: ಬಾಯಾರು ಪದವು ಜಂಕ್ಷನ್‍ನಲ್ಲಿ ಹೈಮಾಸ್ಟ್ ದೀಪ ಕೆಟ್ಟು ಹೋಗಿ ಹಲವಾರು ತಿಂಗಳು ಕಳೆದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ಎರಡು ಬ್ಯಾಂಕ್‍ಗಳು, ಹಲವು ಅಂಗಡಿಗಳು , ಆಟೋ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದು, ಜನನಿಬಿಡ ಪ್ರದೇಶವಾಗಿದೆ. ಈ ಪೇಟೆಯಲ್ಲಿ ರಾತ್ರಿ 7ರ ಬಳಿಕ ಸಂಪೂರ್ಣ ಕತ್ತಲು ಆವರಿಸಿಕೊಳ್ಳುತ್ತಿದೆ. ಲಕ್ಷಾಂತರ ಹಣ ವ್ಯವಯಿಸಿ ನಿರ್ಮಿಸಿದ ಈ ಬೀದಿ ದೀಪ ಈಗ ಉಪಯೋಗಶೂನ್ಯವಾಗಿದೆ. ಇಲ್ಲಿ ಬೀದಿ ದೀಪವಿಲ್ಲದೆ ನಾಗರಿಕರಿಗೆ, ಹಾಗು ವ್ಯಾಪಾರಿಗಳಿಗೆ ಅತೀವ ತೊಂದರೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಅಲ್ಲದೆ ಕಳ್ಳರಿಗೆ ವರದಾನವಾಗಲಿದೆ. ಇದರ ದುರಸ್ತಿ ಕಾರ್ಯಕ್ಕೆ ಇಲ್ಲಿನ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಇಲಾಖೆಯವರಾಗಲಿ ಗಮನ ಕೊಡದಿರುವುದು ದುರದೃಷ್ಟಕರವೆಂದು ಯುವಮೋರ್ಚಾ ಹಾಗೂ ಬಿಎಂಎಸ್ ಪೈವಳಿಕೆ ಪಂಚಾಯತಿ ಸಮಿತಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries