ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಟುಂಬಶ್ರೀ ಮೂಲಕ ಜಾರಿಗೆ ತಂದಿರುವ ಉಚಿತ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 35 ವರ್ಷ ವಯಸ್ಸಿನವರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಎನ್‍ಎಸ್‍ಡಿಸಿ ಸರ್ಟಿಫಿಕೇಟ್ ಇರುವ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ (ಫುಡ್ ಪೆÇ್ರಡಕ್ಷನ್) ಕೋರ್ಸ್‍ಗಳನ್ನು ಒದಗಿಸುತ್ತದೆ.
ಆರ್ಥಿಕವಾಗಿ ಹಿಂದುಳಿದ ಯುವಕ-ಯುವತಿಯರಿಗೆ ಆದ್ಯತೆ ನೀಡಲಾಗುವುದು. ಪ್ಲಸ್ ಟು (ಪಾಸ್/ಫೇಲ್) ವಿದ್ಯಾಭ್ಯಾಸ ಇರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ, ವಸತಿ, ಪ್ರಾಯೋಗಿಕ ತರಬೇತಿ ಮತ್ತು ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 17 ರೊಳಗೆ ವಯನಾಡ್‍ನಲ್ಲಿರುವ ಲವ್ ಗ್ರೀನ್ ಎಂಬ ಸಂಸ್ಥೆಗೆ ಖುದ್ದಾಗಿ ಹಾಜರಾಗಬೇಕು. ತರಬೇತಿ ಕೇಂದ್ರದ ವಿಳಾಸ: ಸರ್ಕಾರಿ ಐಟಿಐ ಹತ್ತಿರ, ಪುಲಿಯಾರ್ಮಲ, ಕಲ್ಪಟ್ಟಾ, ವಯನಾಡ್. ದೂರವಾಣಿ ಸಂಖ್ಯೆ: 7902486000, 9497486000, 04936206062.

