HEALTH TIPS

ವಿವಿಧ ದೇಶಗಳಲ್ಲಿ ಸ್ವಾತಂತ್ರ್ಯೋತ್ಸವ; ಮೊಳಗಿದ 'ವಂದೇ ಮಾತರಂ'

ಲಂಡನ್‌: ವಿವಿಧ ದೇಶಗಳಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. 'ಹರ್‌ ಘರ್‌ ತಿರಂಗಾ' ಅಭಿಯಾನದ ಭಾಗವಾಗಿರುವ 'ಸೂರ್ಯಪಥ ತಿರಂಗಾ' ಕಾರ್ಯಕ್ರಮದ ಅಡಿಯಲ್ಲಿ ವಿವಿಧ ದೇಶಗಳಲ್ಲಿನ ಭಾರತೀಯ ಹೈಕಮಿಷನ್‌ಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿದೆ. 


ಪೆಸಿಫಿಕ್‌ನ ಸಣ್ಣ ದ್ವೀಪ ರಾಷ್ಟ್ರವಾದ ಫಿಜಿಯಲ್ಲಿ ಹೈಕಮಿಷನರ್‌ ಸುನೀತ್ ಮೆಹ್ತಾ ಧ್ವಜಾರೋಹಣ ನೆರವೇರಿಸಿದರು.

ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಜಪಾನ್‌, ದಕ್ಷಿಣ ಕೊರಿಯಾ, ಚೀನಾ, ಇಂಡೊನೇಷ್ಯಾ, ವಿಯೆಟ್ನಾಂ, ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್‌, ಮ್ಯಾನ್ಮಾರ್‌, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್‌, ಉಜ್ಬೇಕಿಸ್ತಾನ, ಓಮಾನ್‌, ಯುಇಎ, ಕತಾರ್‌, ಕುವೈತ್‌ ಹಾಗೂ ಸೌದಿ ಅರೇಬಿಯಾದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗಿದೆ.

ಮೊಳಗಿದ ವಂದೇ ಮಾತರಂ: ಸ್ವಾತಂತ್ರ್ಯ ಹಬ್ಬದ ಆಚರಣೆಗೆ ಜಮಾಯಿಸಿದ್ದ ಭಾರತೀಯರು ವಂದೇ ಮಾತರಂ ಹಾಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದೇಶಿ ನೆಲದಲ್ಲಿ ಭಾರತದ ಆಚರಣೆ, ಸಂಪ್ರದಾಯಗಳ ಕಂಪು ಪಸರಿಸಿದ್ದಾರೆ. ಹಲವು ದೇಶಗಳಲ್ಲಿ ಮುಂಜಾನೆ-ಮಳೆ-ಗಾಳಿ ನಡುವೆಯೂ ವಂದೇ ಮಾತರಂ ಗಾಯನ ಮೊಳಗಿದೆ.

ನೇಕಾರಿಕೆಗೆ ಪ್ರೋತ್ಸಾಹ: ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನರ್‌ ಶಿಲ್ಪಾಕ್‌ ಅಂಬುಲೆ ಅವರ ನೇತೃತ್ವದಲ್ಲಿ ಭಾರತೀಯ ಸಮುದಾಯದ ಸುಮಾರು 2,500 ಮಂದಿ ಸೇರಿ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಮಳೆ ನಡುವೆಯೂ ಆಚರಣೆ: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಧ್ವಹಾರೋಹಣ ನೆರವೇರಿಸಲಾಗಿದೆ.

ಜಾಗತಿಕ ನಾಯಕರಿಂದ ಶುಭಾಶಯ

ಅಮೆರಿಕ ಬ್ರಿಟನ್‌ ಇಸ್ರೇಲ್‌ ರಷ್ಯಾ ಫ್ರಾನ್ಸ್‌ ಸೇರಿದಂತೆ ವಿವಿಧ ದೇಶಗಳ ನಾಯಕರು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತೆಗೆ ಶುಭಕೋರಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಇಸ್ರೇಲ್‌ ಅಧ್ಯಕ್ಷ ಐಸಾಕ್‌ ಹೆರ್ಜೋಗ್ ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್ ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಶುಭಾಶಯ ಕೋರಿರುವ ಪ್ರಮುಖ ಜಾಗತಿಕ ನಾಯಕರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries