ತಿರುವನಂತಪುರಂ: ಆಲ್ ಕೇರಳ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ವಟ್ಟಿಯೂರ್ಕಾವು ಅಜಿತ್ ಕುಮಾರ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಗಿದೆ.
ಆಗಸ್ಟ್ 14 ರ ರಾತ್ರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ರಿಸರ್ಜ್-ಫ್ರೀಡಮ್ ಅಟ್ ಮಿಡ್‍ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಮೇಲೆ ಅವರು ಮೌಖಿಕ ದೌರ್ಜನ್ಯ ಎಸಗಿದ್ದಾರೆ ಎಂಬ ದೂರಲ್ಲಿ ಬಂಧಿಸಲಾಗಿದೆ. ತಿರುವನಂತಪುರಂ ಸೈಬರ್ ಪೋಲೀಸರು ಈ ಬಂಧನವನ್ನು ಮಾಡಿದ್ದಾರೆ.
ರಿಸರ್ಜ್-ಫ್ರೀಡಮ್ ಅಟ್ ಮಿಡ್‍ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ವಿರುದ್ಧ ಅಜಿತ್ ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ್ದರು. ಫೇಸ್‍ಬುಕ್ ವೀಡಿಯೊ ಮೂಲಕ ಬರಹ ರೂಪದಲ್ಲಿ ದೌರ್ಜನ್ಯ ಎಸಗಲಾಗಿದೆ.ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಅಜಿತ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸೈಬರ್ ಪೋಲೀಸರು ತಿಳಿಸಿದ್ದಾರೆ.

