ಕಾಸರಗೋಡು: ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರ ಕಾಸರಗೋಡು ಭೇಟಿ ಹಿನ್ನೆಲೆಯಲ್ಲಿ ಜೆಸಿಐ ವಿದ್ಯಾನಗರ ಘಟಕ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆಗೆ ಗಾಲಿಕುರ್ಚಿ ದೇಣಿಗೆಯಾಗಿ ನೀಡಲಾಯಿತು.
ಈ ಬಗ್ಗೆ ನಡೆದ ಸಮಾರಂಭದಲ್ಲಿ ಅನೀಶ್ ಆರ್. ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಆರ್. ಕೌಶಿಕ್, ವಲಯ ಅಧ್ಯಕ್ಷ ಅರುಣ್ ಪ್ರಭು, ವಲಯ ಉಪಾಧ್ಯಕ್ಷ ರಶೀದ್ ಕೆ.ಎಚ್. ಮತ್ತು ಆರ್‍ಎಂಒ ಡಾ. ಸಂಧ್ಯಾ ಉಪಸ್ಥಿತರಿದ್ದರು.
ಮಹಮ್ಮದ್ ಜಬ್ರೂದ್, ಸಂದೀಪ್ ಆರ್.ಶೆಣೈ, ಯತೀಶ್ ಬಲ್ಲಾಳ್, ಶ್ರೀಮಾ ಪಿ., ಶರಣ್ಯ ನಾರಾಯಣನ್, ದಿವ್ಯಾ ಸುನಿಲ್ ಉಚ್ಚಿಲ್, ವಿಜಯಕುಮಾರ್ ಎಸ್., ಉಪ ನಸಿರ್ಂಗ್ ಅಧೀಕ್ಷಕಿ ನಸೀಮಾ, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ ಡಾ.ಅರುಣ್ ರಾಮ್, ಮಾಹಿನ್ ಕುನ್ನಿಲ್, ಶ್ರೀಧರನ್, ರಾಜೇಶ್ ಮೊದಲದವರು ಉಪಸ್ಥಿತರಿದ್ದರು.


