HEALTH TIPS

ಮಾಸ್ಕೊಗೆ ಬಂದಿಳಿದ ಅಮೆರಿಕ ಸೇನಾ ವಿಮಾನ; ಮಾಹಿತಿ ಇರಲಿಲ್ಲ ಎಂದ ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್

ಮಾಸ್ಕೊ: ಅಮೆರಿಕ ವಾಯುಪಡೆಯ ಸಾಗಣೆ ವಿಮಾನವೊಂದು ಮಂಗಳವಾರ ಮಾಸ್ಕೊದ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ ಎಂದು ವಿಮಾನಗಳ ಸಂಚಾರದ ಮಾಹಿತಿ ನೀಡುವ 'ಫ್ಲೈಟ್ರಾಡಾರ್24' ವೆಬ್ಸೈಟ್ ನ ದತ್ತಾಂಶ ತಿಳಿಸಿದೆ. ಆದರೆ, ವಿಮಾನ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ ಹೇಳಿದೆ.


ಅಮೆರಿಕದ ನೋಂದಣಿ ಟೇಲ್ ನಂಬರ್ ಹೊಂದಿರುವ ಬೋಯಿಂಗ್ 'ಗ್ಲೋಬ್ಮಾಸ್ಟರ್' ವಿಮಾನವು ಜಾಗತಿಕ ಕಾಲಮಾನ (ಯುಟಿಸಿ) ಪ್ರಕಾರ ಮಂಗಳವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಲಾತ್ವಿಯಾದ ರಿಗಾದಿಂದ ಮಾಸ್ಕೊದತ್ತ ಪ್ರಯಾಣ ಬೆಳೆಸಿತ್ತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೆಮ್ಲಿನ್ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್, ಈ ವಾರ ಅಮೆರಿಕ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದರು.

ವಾಷಿಂಗ್ಟನ್ ಸಮೀಪದ ಅಮೆರಿಕದ ಕ್ಯಾಂಪ್ ಸ್ಪ್ರಿಂಗ್ಸ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಆಗಸ್ಟ್ 23ರಂದು ರಿಗಾಗೆ ಆಗಮಿಸಿತ್ತು. ಇದಕ್ಕೂ ಮೊದಲು, ರವಿವಾದ ಮಧ್ಯಾಹ್ನ ವಿಮಾನವು ಮೇರಿಲ್ಯಾಂಡ್ ನಲ್ಲಿರುವ ಅಮೆರಿಕ ವಾಯುಪಡೆಯ 'ಜಾಯಿಂಟ್ ಬೇಸ್ ಆಯಂಡ್ರ್ಯೂಸ್'ನಿಂದ ಹೊರಟಿತ್ತು ಎಂಬುದು ಫ್ಲೈಟ್ರಾಡಾರ್24 ದತ್ತಾಂಶದಿಂದ ತಿಳಿದುಬಂದಿದೆ.

'ಜಾಯಿಂಟ್ ಬೇಸ್ ಆಯಂಡ್ರ್ಯೂಸ್' ಅಮೆರಿಕದ ಪ್ರಮುಖ ಸೇನಾ ಸೌಲಭ್ಯವಾಗಿದ್ದು, ಅಮೆರಿಕದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಅಧಿಕೃತ ವಾಯು ಪ್ರಯಾಣಕ್ಕಾಗಿ ಈ ವಾಯುನೆಲೆಯನ್ನು ಬಳಸುತ್ತಾರೆ.

►ಜನವರಿಯಲ್ಲೂ ಅಮೆರಿಕ ವಿಮಾನ ರಷ್ಯಾಕ್ಕೆ

ಕಳೆದ ಜನವರಿಯಲ್ಲೂ ಅಮೆರಿಕ ನೋಂದಣಿಯ ವಿಮಾನವೊಂದು ಯುರೋಪ್ ನಿಂದ ನೇರವಾಗಿ ರಷ್ಯಾಕ್ಕೆ ತೆರಳಿತ್ತು. ಉಕ್ರೇನ್ಗೆ ಸಂಬಂಧಿಸಿದ ಶಾಂತಿ ಮಾತುಕತೆ ನಡೆಸಲು ಅಮೆರಿಕದ ವಿಶೇಷ ರಾಯಭಾರಿಗಳಾದ ಸ್ಟೀವನ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಈ ವಿಮಾನದಲ್ಲಿ ರಷ್ಯಾಕ್ಕೆ ಆಗಮಿಸಿದ್ದರು.

ಇದೀಗ ಮತ್ತೊಮ್ಮೆ ಅಮೆರಿಕದ ಸೇನಾ ಸಾಗಣೆ ವಿಮಾನವೊಂದು ಮಾಸ್ಕೊಗೆ ಬಂದಿಳಿದಿರುವುದು ಗಮನ ಸೆಳೆದಿದೆ. ಆದರೆ, ವಿಮಾನ ಮಾಸ್ಕೊಗೆ ತೆರಳಿದ ಉದ್ದೇಶವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries