ಉಪ್ಪಳ: 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸದ್ಗುರು ಶ್ರೀನಿತ್ಯಾನಂದ ವಿದ್ಯಾಪೀಠದಲ್ಲಿ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಬಗ್ಗೆ ವಿವಿಧ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಶ್ರೀನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪರಿಸರವನ್ನು ಉಳಿಸಿ, ಬೆಳೆಸಿ, ಪ್ರತಿಯೊಂದು ಜೀವರಾಶಿಗಳಿಗೂ ಆಶ್ರಯವನ್ನು ಒದಗಿಸುವಂತೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಿದ್ಯಾಪೀಠದ ಮಾತೃ ಸಮಿತಿ ಅಧ್ಯಕ್ಷೆ ಲೀಲಾವತಿ ಶೆಟ್ಟಿ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯ ಸುಧಾಕರ್, ವಿ.ಬಿ.ಕುಳಮರ್ವ ಕುಂಬ್ಳೆ, ಚಂದ್ರಹಾಸ ಉಪಸ್ಥಿತರಿದ್ದರು.
ಒಂದರಿಂದ ನಾಲ್ಕನೇ ತರಗತಿಯವರೆಗೆ ಚಿತ್ರಕಲೆ ಸ್ಪರ್ಧೆ, ಐದರಿಂದ ಎಂಟನೇ ತರಗತಿಯವರೆಗೆ ಭಿತ್ತಿಪತ್ರ ರಚನಾ ಸ್ಪರ್ಧೆ, 9 ಮತ್ತು 10ನೇ ತರಗತಿಯವರಿಗೆ ಭಾಷಣ ಸ್ಪರ್ಧೆ ನಡೆಯಿತು. ಒಟ್ಟು 11 ಶಾಲೆಗಳಿಂದ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಪ್ರಾಂಶುಪಾಲೆ ಮಲ್ಲಿಕಾ ಪ್ರಮೋದ್ ಸ್ವಾಗತಿಸಿ, ಶಿಕ್ಷಕಿ ಸುಮಾ. ಎ. ವಂದಿಸಿದರು. ಕುಮಾರಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.

.jpeg)
.jpeg)
