HEALTH TIPS

ಬೆಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೇರಳ ರಸ್ತೆಸಾರಿಗೆ ಸಂಸ್ಥೆ ಬಸ್ಸಿಗೆ ಮೊಟ್ಟೆ ಎಸೆತ-ತಪ್ಪಿದ ದುರಂತ: ಬಿಡದಿಯಲ್ಲಿ ಕಿಡಿಗೇಡಿ ತಂಡ ಕಾರ್ಯಾಚರಿಸುತ್ತಿರುವುದಾಗಿ ಸಂಶಯ

ಬೆಂಗಳೂರು: ಬೆಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೇರಳ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಬಸ್ಸಿಗೆ ಬಿಡದಿ ಎಂಬಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳು ಮೊಟ್ಟೆ ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಎದುರುಗಡೆಯ ಗಾಜು ಪುಡಿಯಾಗಿದೆ.  ಗಾಜಿಗೆಮೊಟ್ಟೆ ಬೀಳುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಹೊರಕ್ಕೆ ಸಂಚರಿಸಿದರೂ, ಚಆಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದುರಂತ ತಪ್ಪಿದೆ.    ಬೆಂಗಳೂರಿನಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿದ್ದ ಬಸ್ ಬಿಡದಿಯ ನಿರ್ಜನ ಪ್ರದೇಶದ ಮೂಲಕ ಸಾಗುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದಾರೆ.  


ಕೋಯಿಕ್ಕೋಡಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಬಸ್  ಆಗಸ್ಟ್ 8ರಂದು ಬಿಡದಿಯ ಸಮೀಪ ಅಪಘಾತಕ್ಕೀಡಾಗಿದ್ದು, ಇದರ ಚಾಲಕ ಮಿಥಿಲೇಶ್ ಮತ್ತು ನಿರ್ವಾಹಕ ಅರುಣ್‍ಕುಮಾರ್‍ಎಸ್.ಎಂ ಸಾವಿಗೀಡಾಗಿದ್ದು,  20ರಷ್ಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಅಪಘಾತಕ್ಕೀಡಾದ ಈ ಬಸ್ಸಿಗೂ ಕಿಡಿಗೇಡಿಗಳು ಮೊಟ್ಟೆ ಎಸೆದ ಗುರುತು ಪತ್ತೆಯಾಗಿತ್ತು. ಗುರುವಾರ ಮತ್ತೆ ಬಿಡದಿ ಬಳಿ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಮೇಲೆ ದುಷ್ಕರ್ಮಿಗಳು ಮೊಟ್ಟೆ ತೂರಾಟ ನಡೆಸಿ ಅಪಘಾತಕ್ಕೊಡ್ಡಲು ಸಂಚು ನಡೆಸಲಾಗಿದೆ.  

ಸಾಮಾನ್ಯವಾಗಿ ಕಿಡಿಗೇಡಿ ಕೃತ್ಯ ನಡೆಯುವ ಸ್ಥಳ ಇದಾಗಿರುವುದರಿಂದ ಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ತೆರಳುವ ಮಧ್ಯೆ, ಸರ್ವೀಸ್ ರಸ್ತೆಯಿಂದ ಆಗಮಿಸಿದ ಮೂರು ಮಂದಿಯ ತಂಡ ಮೊಟ್ಟೆ ಎಸೆದಿದೆ. ಈ ದೃಶ್ಯವನ್ನು ಬಸ್ಸಿನಲ್ಲಿದ್ದ ಕೆಲವರು ತಮ್ಮ ಮೊಬೈಲಲ್ಲಿ ಫೋಟೋ ತೆಗೆದಿದ್ದಾರೆ. ಬಸ್ ನಿಧಾನವಾಗಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಮೊಟ್ಟೆ ಎಸೆದ ತಕ್ಷಣ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಕೆಎಸ್ಸಾರ್ಟಿಸಿ ಕಾಸರಗೋಡು ಡಿಪೋ ಚಾಲಕ ಸುರೇಶನ್ ತಿಳಿಸಿದ್ದಾರೆ.  ಕೃತ್ಯದ ಹಿಂದೆ ವ್ಯವಸ್ಥಿತ ಬುಡಮೇಲು ಕೃತ್ಯ ನಡೆದಿರುವ ಬಗ್ಗೆ ಬಸ್ ಚಾಲಕ ಸಂಶಯ ವ್ಯಕ್ತಪಡಿಸಿದ್ದು, ಆ ಬಗ್ಗೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries