ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ಅನುದಾನವನ್ನು ಕಡಿತಗೊಳಿಸುವ ಐಕ್ಯರಂಗ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಎಡರಂಗ ಕಾಸರಗೋಡು ನಗರಸಭಾ ಸಮಿತಿ ವತಿಯಿಂದ ಕಾಸರಗೋಡು ನಗರಸಭಾ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿತು.
ಕಾರ್ಯಕ್ರಮದ ಅಂಗವಾಗಿ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ಸತ್ಯಾಗ್ರಹ ಆಯೋಜಿಸಲಾಗಿತ್ತು. ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ವಕೀಲ ಸಿ.ಎಚ್. ಕುಞಂಬು ಧರಣಿ ಉದ್ಘಾಟಿಸಿದರು. ಸ್ಥಳೀಯ ಸಮಿತಿ ಕಾರ್ಯದರ್ಶಿ ಪಿ. ಜಾನಕಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಟಿ.ಎಂ.ಎ. ಕರೀಂ, ಎಂ. ಸುಮತಿ, ಶಾಂತಾ ಕುಮಾರಿ ಟೀಚರ್ ಮತ್ತು ಅನಿಲ್ ಚೆನ್ನಿಕ್ಕರ ಉಪಸ್ಥಿತರಿದ್ದರು. ಸಿಪಿಐಎಂ ಕಾಸರಗೋಡು ಸ್ಥಳೀಯ ಸಮಿತಿ ಕಾರ್ಯದರ್ಶಿ ಎಸ್. ಸುನಿಲ್ ಸ್ವಾಗತಿಸಿದರು.

