HEALTH TIPS

ಮಂಜೇಶ್ವರದಲ್ಲಿ ಜಂತುಹುಳ ನಿವಾರಣಾ ದಿನಾಚರಣೆ-ತರಬೇತಿ ಕಾರ್ಯಕ್ರಮಕ್ಕೆ ಚಾಳನೆ

ಮಂಜೇಶ್ವರ: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಬಿಎಫ್‍ಎಚ್‍ಸಿ ವತಿಯಿಂದ ಅಂತರ್‍ವಿಭಾಗೀಯ ಸಂಯೋಜನಾ ಸಭೆ ಹಾಗೂ ತರಬೇತಿ ಕಾರ್ಯಕ್ರಮ   ಮಂಜೇಶ್ವರ ಜಿಡಬ್ಲ್ಯೂಎಲ್‍ಪಿ ಶಾಲೆಯಲ್ಲಿ ಜರುಗಿತು.


ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್ ಸಮಾರಂಭ ಉದ್ಘಾಟಿಸಿದರು. ಆಗಸ್ಟ್ 10 ರಂದು ದೇಶವ್ಯಾಪಿಯಾಗಿ ಆಚರಿಸಲಿರುವ ಜಂತುಹುಳ ನಿವಾರಣಾ ದಿನಾಚರಣೆಯ ಅಂಗವಾಗಿ, ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಬೌದ್ಧಿಕ ಅಭಿವೃದ್ಧಿಯನ್ನು ಗಂಭೀರವಾಗಿ ಬಾಧಿಸುವ ಜಂತುಹುಳು  ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ  ಮಂಜೇಶ್ವರ ಬ್ಲಾಕ್‍ನ 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳೂ ಉಚಿತವಾಗಿ ವಿತರಿಸಲ್ಪಡುವ ಆಲ್ಬೆಂಡಜೋಲ್ ಮಾತ್ರೆಗಳನ್ನು ಪ್ರತಿ ಮಕ್ಕಳು ಸೇವಿಸಬೇಕು ಎಂದು ತಿಳಿಸಿದರು.  ಈ ಸಾರ್ವಜನಿಕ ಆರೋಗ್ಯ ಯೋಜನೆಯು ಮಕ್ಕಳ ಆರೋಗ್ಯ ರಕ್ಷಣೆಗೆ ಹಾಗೂ ಭವಿಷ್ಯದ ಕಲ್ಯಾಣಕ್ಕೆ ಅತ್ಯಂತ ಅಗತ್ಯವಾಗಿರುವುದರಿಂದ ಪೆÇೀಷಕರು ಮತ್ತು ಶಿಕ್ಷಕರು ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.

ಜಂತುಹುಳ ಸೋಂಕು ತಡೆಗಟ್ಟಲು ಶಾಲೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಮೂಲಕ ಉಚಿತವಾಗಿ ಆಲ್ಬೆಂಡಜೋಲ್ ಮಾತ್ರೆ ವಿತರಿಸಲಾಗುತ್ತದೆ. ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ್ ಕನಿಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಫರ್ಹಾನ ಟೀಚರ್,  ಗ್ರಾಪಂ ಸದಸ್ಯರಾದ ಮುಕ್ತಾರ್ ಎ., ಸಬೀನಾ ಟೀಚರ್, ಪಬ್ಲಿಕ್ ಹೆಲ್ತ್ ನರ್ಸ್ ಬಿಂದು ಮೊದಲಾದವರು ಉಪಸ್ಥಿತರಿದ್ದರು.

ತರಬೇತಿಯ ಜೊತೆಗೆ ಸ್ತನ್ಯಪಾನ ವಾರಾಚರಣೆ, ಸ್ಟಾಪ್ ಡಯರಿಯಾ, ಎಚ್‍ಪಿವಿ ಕುರಿತು ತರಗತಿ ನಡೆಯಿತು. ಬಿಎಫ್‍ಎಚ್‍ಸಿ ವೈದ್ಯಾಧಿಕಾರಿ ಪ್ರಭಾಕರ್ ರೈ ತರಗತಿ  ನಡೆಸಿದರು.  ಆರೋಗ್ಯಾಧಿಕಾರಿ ವಿಮಲ ಸ್ವಾಗತಿಸಿದರು. ಕಿರಿಯ ಆರೋಗ್ಯಾಧಿಕಾರಿ ಹಾಶಿಂ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries