HEALTH TIPS

ವಿಹಿಂಪ ಕಾಸರಗೋಡು ಪ್ರಖಂಡ ವತಿಯಿಂದ 'ರಾಮಾಯಣ ಕಥಾ ಸತ್ಸಂಗ'

ಕಾಸರಗೋಡು: ವಿಶ್ವಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವತಿಯಿಂದ 'ರಾಮಾಯಣ ಕಥಾ ಸತ್ಸಂಗ' ಕಾರ್ಯಕ್ರಮ ಆ. 10ರಿಂದ 12ರ ವರೆಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಲಿದೆ.

ಪ್ರತಿದಿನ ಸಂಜೆ 5ರಿಂದ ಸತ್ಸಂಗ ನಡೆಯುವುದು. 10ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಧಾರ್ಮಿಕ ಮುಂದಾಳು ಡಾ>ಅನಂತ ಕಾಮತ್ ಉದ್ಘಾಟಿಸುವರು.   ಡಾ. ವಾಮನ್ ರಾವ್ ಬೇಕಲ್  ಕನ್ನಡ ಭವನ ಗ್ರಂಥಾಲಯ  ಸ್ಥಾಪಕ ಡಾ. ವಾಮನ ರಾವ್ ಬೇಕಲ್, ವಿಎಚ್‍ಪಿ ಕಣ್ಣೂರು ವಿಭಾಗ ಪ್ರಮುಖ್ ಸಂಕಪ್ಪ ಭಂಡಾರಿ ಉಪಸ್ಥಿತರಿರುವರು. 

ವಿದುಷಿ ವೈಭವಿ ಕುಂಬ್ಳೆ  ಸೀತಾರಾಂ ಕಲ್ಯಾಣ ಎಂಬ ಹರಿಕತೆ ನಡೆಸಿಕೊಡುವರು. 

11ರಂದು ಸಂಜೆ 5ಕ್ಕೆ ಧಾರ್ಮಿಕ ಮುಂದಾಳು ಮೀರಾ ಕಾಮತ್ ದೀಪ ಪ್ರಜ್ವಲನೆ ನಡೆಸುವರು. ಸುರೇಂದ್ರ ಆಚಾರ್ಯ ಕಾಸರಗೋಡು ಉಪಸ್ಥಿತರಿರುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ರಾಮಾಯಣ ಪ್ರವಚನ ನಡೆಯುವುದು. 12ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಡಾ. ಕೆ.ಎನ್ ಬಲ್ಲಾಳ್ ದೀಪ ಪ್ರಜ್ವಲಿಸುವರು. ಲಕ್ಷ್ಮಣೋಜಿ ರಾವ್ ಬಹುಮಾನ್ ಉಪಸ್ಥಿತರಿರುವರು. ಈ ಸಂದರ್ಭ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತೋತ್ಸವ ವಿಶೇಷ ತಾಳಮದ್ದಳೆ'ಪಾದುಕಾ ಪ್ರದಾನ'ಜರುಗಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries