ಕಾಸರಗೋಡು: ಜಿಲ್ಲಾ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಸನ್ಮಾನ ಸಮಾರಂಭ ಕಾಸರಗೋಡಿನಲ್ಲಿ ಜರುಗಿತು. ಉಪ್ಪಳ ಅಂಬಾರು ಶ್ರೀ ಮಲರಾಯ ದೈವಸ್ಥಾನದ ಟ್ರಸ್ಟಿ ವೀರಪ್ಪ ಅಂಬಾರ್ ಸಮಾರಂಭ ಉದ್ಘಾಟಿಸಿದರು.
ಬಿಲ್ಲವ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಕಮಲಾಕ್ಷ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 2025-26ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಮಾಜದ ಪ್ರಮುಖರನ್ನು ಸನ್ಮಾನಿಸಲಾಯಿತು. ಕಾಸರಗೋಡು ನಗರಸಭಾ ಸದಸ್ಯ ಕೆ.ಆರ್. ಹರೀಶ್, ನಿವೃತ್ತ ಶಿಕ್ಷಕ ಅಶೋಕ್ ಬಾಡೂರು, ಕೆ.ಸರೋಜಿನಿ, ಚಂದ್ರಶೇಖರ ಚಿಪ್ಲುಕೋಟೆ, ಕೆ.ಸುರೇಶ್ ಸುವರ್ಣ, ಲವ ಮೀಪುಗುರಿ, ಕೆ.ಶಿವ, ನಾರಾಯಣ ಕೊರಕ್ಕೋಡ್, ವಸಂತಿ ಟೀಚರ್ ಉಪಸ್ಥಿತರಿದ್ದರು. ಬಿಲ್ಲವ ಸಏವಾಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಭಾಸ್ಕರ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ರವಿ ಕೋಟೆಕ್ಕಾರ್ ವಂದಿಸಿದರು.

