HEALTH TIPS

ಪೆರ್ಲ ಮರಾಟಿ ಬೋರ್ಡಿಂಗ್ ಹಾಲ್ ನಲ್ಲಿ ಆಟಿಟೊಂಜಿ ದಿನ ಕಾರ್ಯಕ್ರಮ

ಪೆರ್ಲ: ಆಟಿಟೊಂಜಿ ದಿನ ಕಾರ್ಯಕ್ರಮ ಪೆರ್ಲ ಮರಾಟಿ ಬೋಡಿರ್ಂಗ್ ಹಾಲ್‍ನಲ್ಲಿ ಜರುಗಿತು.  ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಶ್ರೀ ಶಾರದಾ ಚಾರಿಟಬಲ್ ಟ್ರಸ್ಟ್ ಪೆರ್ಲ ಹಾಗೂ ಶ್ರೀ ಶಾರದಾ ಮಹಿಳಾ ವೇದಿಕೆ ಸಹಯೋಗದೊಮದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 


ಕುಮಾರಿ ಸಾನ್ವಿ ಏಳ್ಕಾನ, ಭವ್ಯ ಮಲಂಗರೆ, ಶ್ರೀಮತಿ ನವೀನ ಕುಮಾರಿ ಏಳ್ಕಾನ, ಮತ್ತು ವಿದ್ಯಾ ಮಣಿಯಂಪಾರೆ ಇವರ ಪ್ರಾರ್ಥನೆಯೊಂದಿಗೆ  ಶಾರದಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ ಬಿ.ಜಿ ನಾಯ್ಕ ಸಮಾರಂಭ ಉದ್ಘಾಟಿಸಿ, ಹಿಂದಿನ ಕಾಲದ ಆಟಿ ತಿಂಗಳ ದುರಿತ, ವಿಶೇಷತೆ ಹಾಗೂ ಇಂದಿನ ಕಾಲದ ಸಂಭ್ರಮದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಹಿರಿಯ ಕೃಷಿಕ ಅಪ್ಪಣ್ಣ ನಾಯ್ಕ  ಬಾಳೆಗುಳಿ ಅವರು ಆಟಿಮಾಸದ ವಿಶೇಷತೆ ಬಗ್ಗೆ ವಿವರಿಸಿದರು. ಶಿಕ್ಷಕ ಜನಾರ್ದನ ದುರ್ಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.   ಶ್ರೀ ಶಾರದಾ ಮರಾಟಿ ಸೇವಾ ಸಂಘದ ಅಧ್ಯಕ್ಷೆ ಪುಷ್ಪ ಅಮೆಕ್ಕಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಹಿರಿಯ ಮಕ್ಕಳ ತಜ್ಞ  ಡಾ. ನಾರಾಯಣ  ನಾಯ್ಕ ಕಾಸರಗೋಡು ಅವರು ಸಿಪಿಆರ್ ನ ಬಗ್ಗೆ ಮಾಹಿತಿ ಹಾಗೂ  ಪ್ರಾಯೋಗಿಕ ಪ್ರದರ್ಶನ ನೀಡುವುದರೊಂದಿಗೆ  ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಿದರು.  ಬಾಲಕೃಷ್ಣ ನಾಯ್ಕ ಬಾರಿಕ್ಕಾಡ್, ಲಕ್ಷ್ಮಿ ಟೀಚರ್ ನಲ್ಕ, ಡಾ. ಕೃಷ್ಣ  ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.  ಮಹಿಳಾಸಂಘದ ಉಪಾಧ್ಯಕ್ಷೆ ಶ್ರೀಮತಿ ಭವಾನಿ  ಬಾಳೆಗುಳಿ  ಸ್ವಾಗತಿಸಿದರು.  ಹರ್ಷಿತಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ವಾರಿಜ  ಅಡ್ಯನಡ್ಕ ವಂದಿಸಿದರು.   ಪಂಚಾಯತ್ ಸಿ ಡಿ ಎಸ್ ಅಧ್ಯಕ್ಷೆ  ನವೀನಕುಮಾರಿಯವರು ಸಹಕರಿಸಿದರು.

ಈ ಸಂದರ್ಭ ಸಂಘದ ಸದಸ್ಯೆಯರು ಮನೆಯಲ್ಲಿ ಸ್ವಂತವಾಗಿ ತಯಾರಿಸಿದ ಮೂವತ್ತಕ್ಕೂ ಹೆಚ್ಚಿನ ಸಾಂಪ್ರದಾಯಿಕ ಆಟಿಮಾಸದ ಖಾದ್ಯಗಳನ್ನು ವಿತರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries