HEALTH TIPS

ಎಂಡಿಎಂಎ ಪ್ರಕರಣದಲ್ಲಿ ಆರೋಪಿಗಳಾದ ಶಿಕ್ಷಕಿಯರು: ಹಣ ವರ್ಗಾವಣೆಯಲ್ಲಿ ಭಾಗಿಯಾದವರನ್ನು ವಶಕ್ಕೆ ಪಡೆಯಲು ಕ್ರಮ: ಕೀರ್ತನಾ ಜಾಮೀನು ಅರ್ಜಿ ಪರಿಗಣನೆ

ಕೋಝಿಕ್ಕೋಡ್: ಕೋಝಿಕ್ಕೋಡ್‍ನ ವಡಗರದಲ್ಲಿ ಆರೋಪಿಗಳಾದ ಶಿಕ್ಷಕರು ಭಾಗಿಯಾಗಿರುವ ಎಂಡಿಎಂಎ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ತೀವ್ರಗೊಳಿಸಿದೆ. ಶಿಕ್ಷಕಿಯರೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಹಣ ವರ್ಗಾವಣೆಯಲ್ಲಿ ಭಾಗಿಯಾದವರನ್ನು ಮೊದಲು ಹಿಡಿಯಲಾಗುವುದು. ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಪೆರಂಬ್ರಾ ಬಿಆರ್‍ಸಿ ತಜ್ಞ ಶಿಕ್ಷಕಿ ಕೀರ್ತನಾ ಅವರ ಜಾಮೀನು ಅರ್ಜಿಯನ್ನು ವಡಕರೆುನ್.ಡಿ.ಪಿಸಿ ನ್ಯಾಯಾಲಯ ಇಂದು ಪರಿಗಣಿಸಿದೆ. 


ಹಣಕಾಸಿನ ವಹಿವಾಟು ನಡೆಸಿದ ಕೀರ್ತನಾ, ಕಾವ್ಯ ಮತ್ತು ನೀಷ್ಮಾ ಅವರ ಬ್ಯಾಂಕ್ ಖಾತೆ ವಿವರಗಳು ಮತ್ತು ಪೋನ್ ಕರೆ ವಿವರಗಳನ್ನು ಸಂಗ್ರಹಿಸಲಾಗಿದೆ. ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುವ ಭಾಗವಾಗಿ, ತನಿಖಾ ತಂಡವು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಎಟಿಎಂಗಳ ಮೂಲಕ ಹಣ ಹಿಂಪಡೆಯುವಿಕೆಯಂತಹ ವಿಷಯಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.

ಎಟಿಎಂ ಕೌಂಟರ್‍ನಿಂದ ತಮ್ಮ ಕಾರ್ಡ್‍ಗಳನ್ನು ಬಳಸಿಕೊಂಡು ಹಣ ವಿತ್‍ಡ್ರಾ ಮಾಡಿದವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಅನುಮತಿಗಾಗಿ ತನಿಖಾ ತಂಡವು ಬ್ಯಾಂಕ್‍ಗಳಿಗೆ ಪತ್ರ ಬರೆದಿದೆ. ಈ ಮೂಲಕ ಹಣ ಡ್ರಾ ಮಾಡಿದ ವ್ಯಕ್ತಿ ಪತ್ತೆಯಾಗಿದಲ್ಲಿ, ಅವರೂ ಈ ಪ್ರಕರಣದಲ್ಲಿ ಆರೋಪಿಗಳಾಗುತ್ತಾರೆ. ಸೈಬರ್ ಸೆಲ್ ಸಹಾಯದಿಂದ ಪೆÇಲೀಸರು ಸಾವಿರಾರು ಫೆÇೀನ್ ಕರೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ರೀತಿ ಹೆಚ್ಚಿನ ಮಾಹಿತಿ ಸಿಕ್ಕರೆ ಮಾತ್ರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಪೋಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. 

ಎಂಡಿಎಂಎ ಪ್ರಕರಣದಲ್ಲಿ ಪಡೆದ ಎಲ್ಲಾ ಹಣವು ವಯನಾಡ್ ಮೂಲದ ವ್ಯಕ್ತಿಯ ಖಾತೆಗೆ ಹೋಗಿದೆ ಎಂದು ತನಿಖಾ ತಂಡವು ಪತ್ತೆಮಾಡಿದೆ. ಸಗಟು ವಿತರಕರಾಗಿರುವ ಈ ವ್ಯಕ್ತಿಯ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಸಿಕ್ಕಿದೆ. ಸೈಬರ್ ಸೆಲ್ ಸಹಾಯದಿಂದ ತನಿಖಾ ತಂಡವು ಆತನನ್ನು ಹುಡುಕಲು ಪ್ರಯತ್ನಿಸುತ್ತಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries