ಕಾಸರಗೋಡು: ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಾಗರಪಂಚಮಿ ಅಂಗವಾಗಿನಾಗಾರಾಧನೆ ನಡೆಯಿತು. ದೇವಸ್ಥಾನಗಳ ನಾಗಸನ್ನಿಧಿ, ತರವಾಡುಮನೆ, ನಾಗಬನಗಳಲ್ಲಿ ವಿಶೇಷ ಆರಾಧನೆ ನಡೆದುಬಂತು.
ಕಾಸರಗೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹದ ಶ್ರೀನಾಗರಾಜ ಕಟ್ಟೆ, ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸನಿಹದ ನಾಗನ ಕಟ್ಟೆಯಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಅಭಿಷೇಕ, ಪೂಜೆ ನಡೆಯಿತು. ಪುರೋಹಿತ ಹರಿನಾರಾಯಣ ಮಯ್ಯ ಕುಂಬಳೆ ಅವರ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ಅಭಿಷೇಕ, ಪೂಜೆ ನಡೆಯಿತು.
ಸೀಯಾಳ ಹಾಗೂ ದನದ ಹಾಲಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು. ಸೀಯಾಳ 50ರಿಂದ 70ರೂ ವರೆಗೂ ಮಾರಾಟವಾಗಿತ್ತು.
ಚಿತ್ರ: ಕಾಸರಗೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹದ ಶ್ರೀನಾಗರಾಜ ಕಟೆಯಲ್ಲಿ ನಾಗಾರಾಧನೆ ನಡೆಯಿತು.

