HEALTH TIPS

ಇಂದು ಕಾಞಂಗಾಡಿನಲ್ಲಿ ಸಪ್ಲೈಕೋ ಜಿಲ್ಲಾ ಓಣಂ ಮೇಳ ಆರಂಭ

ಕಾಸರಗೋಡು: ಓಣಂ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ನಿಯಂತ್ರಣ ಕ್ರಮಗಳ ಅಂಗವಾಗಿ ಕೇರಳಂ ರಾಜ್ಯ ನಾಗರಿಕ ಸರಬರಾಜು ನಿಗಮವು (ಸಪ್ಲೈಕೋ) ಆಯೋಜಿಸಿರುವ ಜಿಲ್ಲಾ ಓಣಂ ಮೇಳ ಇಂದಿನಿಂದ(ಆಗಸ್ಟ್ 14 ರಿಂದ) ಆರಂಭಗೊಳ್ಳಲಿದೆ. ಸಂಜೆ 4ಕ್ಕೆ ನೀಲೇಶ್ವರ ಬಜಾರ್‍ನ ತೆರು ಜಂಕ್ಷನ್‍ನಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು.  


ಶಾಸಕ ಸಂದೀಪ್ ವಾರಿಯರ್ ಅಧ್ಯಕ್ಷತೆ ವಹಿಸುವರು. ನೀಲೇಶ್ವರಂ ನಗರಸಭೆಯ ಅಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ ಮೊದಲ ಮಾರಾಟವನ್ನು ನೆರವೇರಿಸುವರು.  ಜಿಲ್ಲೆಯ ಶಾಸಕರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಇತರ ಚುನಾಯಿತ ಪ್ರತಿನಿಧಿಗಳು ಮತ್ತು ರಾಜಕೀಯ ಹಾಗೂ ಸಾಮಾಜಿಕ ರಂಗದ ಪ್ರಮುಖ ಗಣ್ಯರು ಇದರಲ್ಲಿ ಪಾಲ್ಗೊಳ್ಳುವರು. 

ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನಿತ್ಯೋಪಯೋಗಿ ಸಾಮಗ್ರಿ ಲಭ್ಯವಾಗಿಸುವುದರ ಜೊತೆಗೆ, ಓಣಂ ಮೇಳದ ಅಂಗವಾಗಿ ವಿಶೇಷ ಕೊಡುಗೆಗಳು ಮತ್ತು ಆಕರ್ಷಕ ಬಹುಮಾನ ಯೋಜನೆಗಳನ್ನು ಸಪ್ಲೈಕೋ ಏರ್ಪಡಿಸಿದೆ ಎಂದು ಸಪ್ಲೈಕೋ ಕಾಞಂಗಾಡು ಡಿಪೆÇೀ ವ್ಯವಸ್ಥಾಪಕರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries