HEALTH TIPS

ಕೊಡ್ಲಮೊಗರು ಶಾಲೆಯಲ್ಲಿ ಲಿಟಲ್ ಕೈಟ್ಸ್ ಪ್ರಾಥಮಿಕ ಶಿಕ್ಷಾವರ್ಗ

ಮಂಜೇಶ್ವರ: 2026=29ನೇ ಸಾಲಿನ ಲಿಟಲ್ ಕೈಟ್ಸ್ ಪ್ರಾಥಮಿಕ ಶಿಕ್ಷಾವರ್ಗ ಶನಿವಾರ ಎಸ್.ವಿ.ವಿ.ಎಚ್.ಎಸ್.ಎಸ್. ಕೊಡ್ಲಮೊಗರು ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ. ಅವರು ಉದ್ಘಾಟಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೋಹನ ಬಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಮಂಜೇಶ್ವರದ ಮಾಸ್ಟರ್ ಟ್ರೈನರ್ ಕಿರಣ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಿದರು. ವಿದ್ಯಾರ್ಥಿಗಳಿಗೆ ಅನಿಮೇಷನ್, ರೋಬೋಟಿಕ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಮಧ್ಯಾಹ್ನ 2.30ಕ್ಕೆ ಪೋಷಕರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿರಣ್ ಕುಮಾರ್ ಅವರು ತರಗತಿಯನ್ನು ನಡೆಸಿಕೊಟ್ಟರು. ತರಬೇತಿ ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧುಶ್ಯಾಮ್ ಸ್ವಾಗತಿಸಿ, ಪುಷ್ಪಲತಾ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries