HEALTH TIPS

ಭಾನುವಾರ ಮತ್ತು ಪ್ರವಾದಿ ದಿನದಂದು ತೆರೆದಿರಲಿರುವ ಪಡಿತರ ಅಂಗಡಿಗಳು

ತಿರುವನಂತಪುರಂ: ಆಗಸ್ಟ್ 23 (ಭಾನುವಾರ) ಮತ್ತು 25 ಪ್ರವಾದಿ ದಿನ (ಮಂಗಳವಾರ) ಪಡಿತರ ಅಂಗಡಿಗಳಿಗೆ ಕೆಲಸದ ದಿನಗಳಾಗಿರುತ್ತವೆ. ಬದಲಾಗಿ, ಆಗಸ್ಟ್ 27 ಮತ್ತು ಸೆಪ್ಟೆಂಬರ್ 2 ರಜಾದಿನಗಳಾಗಿರುತ್ತದೆ ಮತ್ತು ಆಗಸ್ಟ್ 25 ಪ್ರವಾದಿ ದಿನದ ಆಚರಣೆಯ ಸಂದರ್ಭದಲ್ಲಿ ನಿಬರ್ಂಧಿತ ರಜಾದಿನವಾಗಿರುತ್ತದೆ ಎಂದು ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತರು ತಿಳಿಸಿದ್ದಾರೆ. ಓಣಂ ಹಬ್ಬದ ರಜಾದಿನಗಳಲ್ಲಿ ಪಡಿತರ ಅಂಗಡಿಗಳು ತೆರೆಯುವುದಕ್ಕೆ ಬದಲಾಗಿ ಈ ವ್ಯವಸ್ಥೆ ಮಾಡಲಾಗಿದೆ. 


ರಾಜ್ಯ ಆಹಾರ ಇಲಾಖೆಯಿಂದ ಉಚಿತ ಓಣಕ್ಕಿಟ್‍ಗಳ ವಿತರಣೆಯು 100 ಪ್ರತಿಶತ ಪೂರ್ಣಗೊಂಡಿದೆ ಎಂದು ಸಚಿವ ಅನೂಪ್ ಜಾಕೋಬ್ ಘೋಷಿಸಿದರು. ತಿರುಓಣಂಗೆ ನಾಲ್ಕು ದಿನಗಳ ಮೊದಲು ವಿತರಣೆ ಪೂರ್ಣಗೊಂಡಿದ್ದು, ದಾಖಲೆ ನಿರ್ಮಿಸಲಾಗಿದೆ. ಗುರಿ ನಿಗದಿಪಡಿಸಿದ 5,93,408 ಕಿಟ್‍ಗಳನ್ನು ತಯಾರಿಸಿ ಸಪ್ಲೈಕೋ ಮೂಲಕ ಪಡಿತರ ಅಂಗಡಿಗಳಿಗೆ ತಲುಪಿಸಲಾಗಿದೆ.

ಇದಲ್ಲದೆ, ಕಲ್ಯಾಣ ಸಂಸ್ಥೆಗಳಿಗೆ 8,902 ಉಚಿತ ಕಿಟ್‍ಗಳನ್ನು ಒದಗಿಸಲಾಗಿದೆ. ಟಿಎಸ್‍ಒಗಳಿಂದ 6,02310 ಕಿಟ್‍ಗಳ ಬೇಡಿಕೆ ಇದೆ. ಇಲ್ಲಿಯವರೆಗೆ, 4,30,254 ಪಡಿತರ ಚೀಟಿದಾರರು ಓಣಂಕಿಟ್ ಪಡೆದಿದ್ದಾರೆ ಮತ್ತು ಪ್ರಸ್ತುತ 1,59,582 ಕಿಟ್‍ಗಳು ಪಡಿತರ ಅಂಗಡಿಗಳಲ್ಲಿ ಸ್ಟಾಕ್‍ನಲ್ಲಿವೆ ಎಂದು ಸಚಿವರು ಹೇಳಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries