ನವದೆಹಲಿ: ಸಾವರ್ಕರ್ ವಿಷಯದಲ್ಲಿ ರಸ ಪ್ರಶ್ನೆ ಸಿದ್ಧ ಪಡಿಸಿದ ಶಿಕ್ಷಕನನ್ನು ಅಮಾನತುಗೊಳಿಸಿದ ಪ್ರಕರಣ ಬುಧವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ರಾಜ್ಯ ಸಭಾ ಸದಸ್ಯ ಸದಾನಂದನ್ ಮಾಸ್ಟರ್ ಈ ವಿಷಯವನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ್ದಾರೆ.
ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಬಿಲ್ ಚರ್ಚೆಯ ವೇಳೆ ಸದಾನಂದನ್ ಮಾಸ್ಟರ್ ಸಾವರ್ಕರ್ ವಿಷಯವನ್ನು ಪ್ರಸ್ತಾಪಿಸಿದ್ದರು. ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರೂ ಬೆಂಬಲಿಸಿ ಮಾತನಾಡಿದ್ದರು.
ಸಾವರ್ಕರ್ ವಿಷಯದಲ್ಲಿ ಪ್ರಶ್ನೆ ಸಿದ್ಧಪಡಿಸಿದ ತಂಡದ ಓರ್ವ ಹಾಗೂ ಪಳ್ಳತ್ತಡ್ಕ ಎ.ಯು.ಪಿ.ಶಾಲೆಯ ಹಿರಿಯ ಶಿಕ್ಷಕ ಗುರುಪ್ರಸಾದ್ ಅವರನ್ನು ರಾಜ್ಯ ಶಿಕ್ಷಣ ಇಲಾಖೆ ಸೇವೆಯಿಂದ ಅಮಾನತುಗೊಳಿಸಿತ್ತು. ಈ ಪ್ರಕರಣದ ವಿರುದ್ಧ ಬಿಜೆಪಿ ಸೇರಿದಂತೆ ಸಂಘ ಪರಿವಾರ ಸಂಘಟನೆಗಳು ರಾಜ್ಯ ವ್ಯಾಪಕ ಪ್ರತಿಭಟನೆ ನಡೆಸಿದೆ.

