ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಹಲವಾರು ತಿಂಗಳುಗಳ ತೀವ್ರ ಬೆಲೆ ಏರಿಕೆಯ ಬಳಿಕ, ಸರ್ಕಾರವು ಶನಿವಾರ ಆಗಸ್ಟ್ 1 ರಿಂದ ದಿಲ್ಲಿ ಮತ್ತು ಕೊಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಬೆಲೆಯನ್ನು 200ರೂ. ಗೂ ಹೆಚ್ಚು ಕಡಿತಗೊಳಿಸಿದೆ ಎಂದು ANI ವರದಿ ಮಾಡಿದೆ.
ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ, ದಿಲ್ಲಿಯಲ್ಲಿ 202 ರೂ. ಹಾಗೂ ಕೊಲ್ಕತ್ತಾದಲ್ಲಿ 209 ರೂ. ಕಡಿತಗೊಳಿಸಲಾಗಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಈ ಕಡಿತದ ಬಳಿಕ ಶನಿವಾರದಿಂದ ವಾಣಿಜ್ಯ ಬಳಕೆಯ LPG ಸಿಲಿಂಡರ್ ದಿಲ್ಲಿಯಲ್ಲಿ 2,728 ರೂ. ಮತ್ತು ಕೊಲ್ಕತ್ತಾದಲ್ಲಿ 2,872.50 ರೂ. ಆಗಲಿದೆ.
ಆದರೆ, ಗೃಹಬಳಕೆಯ 14.2 ಕೆಜಿ LPG ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಮಧ್ಯಪ್ರಾಚ್ಯ ಯುದ್ಧಕ್ಕೆ ಸಂಬಂಧಿಸಿದ ಪೂರೈಕೆಯ ಅಸ್ತವ್ಯಸ್ತತೆಯಿಂದ ಜಾಗತಿಕ LPG ಬೆಲೆಗಳು ಏರಿಕೆಯಾಗಿದ್ದವು. ಹಲವಾರು ತಿಂಗಳುಗಳಲ್ಲಿ ಆಗಿದ್ದ ಭಾರಿ ಬೆಲೆ ಏರಿಕೆಯ ಬಳಿಕ ಕಳೆದ ಜುಲೈನಲ್ಲಿ ಬೆಲೆ ಕಡಿತವಾಗಿತ್ತು. ಇದು ಸತತ ಎರಡನೇ ಮಾಸಿಕ ಇಳಿಕೆಯಾಗಿದೆ.

