HEALTH TIPS

Madhya Pradesh | ಅನಲಾಗ್ ಪನೀರ್ ಮಾರಾಟ ನಿಷೇಧ

ಭೋಪಾಲ್: ಮಧ್ಯಪ್ರದೇಶದಲ್ಲಿ ಅನಲಾಗ್ ಪನೀರ್‌ನ ಮಾರಾಟವನ್ನು ನಿಷೇಧಿಸಲು ಅಲ್ಲಿನ ರಾಜ್ಯ ಸರಕಾರ ನಿರ್ಧರಿಸಿದೆ. ಇಂತಹ ಆಹಾರ ವಸ್ತುಗಳನ್ನು ಉತ್ಪಾದಿಸುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು, ರಾಜ್ಯದಲ್ಲಿ ಕೇವಲ ನೈಸರ್ಗಿಕ ಪನೀರ್‌ನ ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಬುಧವಾರ ತಿಳಿಸಿದ್ದಾರೆ.


ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಸ್ಟಾರ್ಚ್ ಹಾಗೂ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ತಯಾರಿಸುವ ಪನೀರ್‌ಗಳಿಗೆ ಅನಲಾಗ್ ಪನೀರ್ ಎಂದು ಕರೆಯಲಾಗುತ್ತದೆ. ಅಸಲಿ ಪನೀರ್ ತರಹವೇ ಕಾಣುವ ಈ ನಕಲಿ ಪದಾರ್ಥವು ಅಗ್ಗದ ಪದಾರ್ಥಗಳಿಂದ ಉತ್ಪಾದನೆಯಾಗುವುದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ.

ಮುಖ್ಯಮಂತ್ರಿ ಮೋಹನ್‌ಯಾದವ್ ಬುಧವಾರ ಹೇಳಿಕೆಯೊಂದನ್ನು ನೀಡಿ, ಅನಲಾಗ್ ಪನೀರ್ ಮಾರಾಟದ ಮೇಲಿನ ನಿಷೇಧವನ್ನು ಘೋಷಿಸಿದರು. ಇತರ ರಾಜ್ಯಗಳಲ್ಲಿಯೂ ಅನಲಾಗ್ ಪನೀರ್ ನಿಷೇಧಿಸಲಾಗಿದೆ. ನೈಸರ್ಗಿಕವಾಗಿ ಪನೀರ್ ಅನ್ನು ಉತ್ಪಾದಿಸುವ ಮೂಲಕ ಮಧ್ಯಪ್ರದೇಶವು ಈ ಉತ್ಪನ್ನಗಳ ಮೇಲೆ ತನ್ನ ಗುರುತನ್ನು ಮೂಡಿಸಲಿದೆ ಎಂದವರು ಹೇಳಿದರು.

ಹೈನುಗಾರಿಕೆ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲಿ ಮಧ್ಯಪ್ರದೇಶವು ಮುಂಡಿಯಿಡುತ್ತಿದೆ ಹಾಗೂ ಅನಲಾಗ್‌ ಪನೀರ್ ಉತ್ಪಾದನೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲವೆಂದು ಸಿಎಂ ಸ್ಪಷ್ಟಪಡಿಸಿದರು. ಚತ್ತೀಸ್‌ಗಡ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಇತ್ತೀಚೆಗೆ ಅನಾಲಾಗ್ ಪನೀರ್‌ನ ಮಾರಾಟವನ್ನು ನಿಷೇಧಿಸಿದ್ದವು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries