HEALTH TIPS

NEET-PG ಪರೀಕ್ಷೆಯಲ್ಲಿ ಹಲವು ಬದಲಾವಣೆ: ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಪಿಜಿ 2026) ಬರೆಯಲಿರುವ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷಾರ್ಥಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಸಿಹಿ ಸುದ್ದಿ ನೀಡಿದೆ. ಈ ಬಾರಿ ಅಭ್ಯರ್ಥಿಗಳಿಗೆ ಅವರ ನಿವಾಸಕ್ಕೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳನ್ನೇ ಹಂಚಿಕೆ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷೆ ನಡೆಯುವ ನಗರದ ಮಾಹಿತಿಯನ್ನು ಪರೀಕ್ಷೆಗೂ ಸುಮಾರು 3 ವಾರಗಳ ಮುಂಚಿತವಾಗಿ ತಿಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 


ಆಗಸ್ಟ್ 30ರಂದು ನಡೆಯಲಿರುವ ನೀಟ್-ಪಿಜಿ 2026 ಪರೀಕ್ಷೆಯ ಸಿದ್ಧತೆಯ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯ ಬಳಿಕ ಪ್ರಮುಖ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಪ್ರಮುಖ ಸುಧಾರಣೆಗಳು

ಸ್ವಂತ ರಾಜ್ಯಕ್ಕೆ ಮೊದಲ ಆದ್ಯತೆ: ಈ ಹಿಂದೆ ಇದ್ದ 'ಮೊದಲು ಬಂದವರಿಗೆ ಮೊದಲ ಆದ್ಯತೆ' (First-come, First-served) ನಿಯಮವನ್ನು ತೆಗೆದುಹಾಕಲಾಗಿದೆ. ಹೊಸ ವ್ಯವಸ್ಥೆಯಡಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಅವರಿಗೆ ಅನುಕೂಲಕರವಾಗಿರುವ 3 ರಾಜ್ಯಗಳ ಆದ್ಯತೆಯನ್ನು ನೀಡಬೇಕಾಗುತ್ತದೆ. ಇದರಲ್ಲಿ ಅಭ್ಯರ್ಥಿಯ ಪ್ರಸ್ತುತ ವಾಸಸ್ಥಳದ ರಾಜ್ಯವೇ ಮೊದಲ ಮತ್ತು ಕಡ್ಡಾಯ ಆದ್ಯತೆಯಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳು ದೂರದ ರಾಜ್ಯಗಳಿಗೆ ಪ್ರಯಾಣಿಸುವ ಹೊರೆ ತಪ್ಪಲಿದೆ.

ಮೂರು ವಾರ ಮುಂಚಿತವಾಗಿ ಪರೀಕ್ಷಾ ನಗರದ ಮಾಹಿತಿ: ಈ ಮೊದಲುಪರೀಕ್ಷಾರ್ಥಿಗಳಿಗೆ ತಮ್ಮ ಪರೀಕ್ಷಾ ನಗರ ಯಾವುದು ಎಂಬ ಮಾಹಿತಿಯು 6-7 ದಿನಗಳ ಮೊದಲು ತಿಳಿಯುತ್ತಿತ್ತು. ಆದರೆ, ಈ ಬಾರಿ ಸುಮಾರು 21 ದಿನಗಳ (3 ವಾರ) ಮುಂಚಿತವಾಗಿಯೇ ಮಾಹಿತಿ ಸಿಗಲಿದೆ. ಇದರಿಂದ ಪ್ರಯಾಣ ಹಾಗೂ ತಂಗುವ ವ್ಯವಸ್ಥೆ ಕಾಯ್ದಿರಿಸಲು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.

ಪ್ರಶ್ನೆಗೆ ಹೆಚ್ಚಿನ ಸಮಯ (Revised Exam Pattern): ಪರೀಕ್ಷಾ ಮಾದರಿಯಲ್ಲೂ ಮಾರ್ಪಾಡು ಮಾಡಲಾಗಿದ್ದು, 210 ನಿಮಿಷಗಳಲ್ಲಿ 180 ಪ್ರಶ್ನೆಗಳಿಗೆ ಉತ್ತರಿಸಲು ಪರೀಕ್ಷಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಹೆಚ್ಚಿನ ಸಮಯ ಸಿಗಲಿದೆ. ಈ ಹಿಂದೆ, ಪರೀಕ್ಷೆಯು ಗರಿಷ್ಠ 800 ಅಂಕಗಳನ್ನು ಹೊಂದಿದ್ದು, 200 ಪ್ರಶ್ನೆಗಳನ್ನು ಒಳಗೊಂಡಿತ್ತು.

ಒಂದೇ ಶಿಫ್ಟ್‌ನಲ್ಲಿ ಪರೀಕ್ಷೆ: ದೇಶಾದಾದ್ಯಂತ ಸುಮಾರು 340ಕ್ಕೂ ಹೆಚ್ಚು ನಗರಗಳಲ್ಲಿ ಹಾಗೂ 1,300ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಶಿಫ್ಟ್‌ನಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 2,73,183 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಂಖ್ಯೆ ಶೇ. 12.5 ರಷ್ಟು ಹೆಚ್ಚಳವಾಗಿದೆ.

ಆಧಾರ್ ಬಯೋಮೆಟ್ರಿಕ್: ಅರ್ಜಿ ಸಲ್ಲಿಸುವಾಗ ಹಾಗೂ ಪರೀಕ್ಷಾ ದಿನದಂದು ಆಧಾರ್ ಕಾರ್ಡ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಇರಲಿದೆ. ಬೆರಳಚ್ಚು (Thumb) ಸಿಗದಿದ್ದರೆ, ಐರಿಸ್ (Iris) ಸ್ಕ್ಯಾನ್ ಮಾಡಲಾಗುತ್ತದೆ.

ಸಿಸಿಟಿವಿ ಮತ್ತು ಜ್ಯಾಮರ್: ಪ್ರತಿಯೊಂದು ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲು ಹಾಗೂ ಸಿಗ್ನಲ್ ಜ್ಯಾಮರ್‌ಗಳನ್ನು ಅಳವಡಿಸಲಾಗುತ್ತದೆ.

ಪ್ರಶ್ನೆ ಪತ್ರಿಕೆ ಸುರಕ್ಷತೆ: ಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಹಿಡಿದು ಪರೀಕ್ಷೆ ಪ್ರಾರಂಭವಾಗುವವರೆಗೆ ಡಿಜಿಟಲ್ ಎನ್‌ಕ್ರಿಪ್ಷನ್ (Encryption) ವ್ಯವಸ್ಥೆ ಇರಲಿದೆ. ಒಟ್ಟಾರೆಯಾಗಿ, ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries