HEALTH TIPS

ಮುಂದಿನ 10 ವರ್ಷದಲ್ಲಿ ದೇಶದಲ್ಲಿ ಹೊಸ 100 ಏರ್‌ಪೋರ್ಟ್: ಸಚಿವ ರಾಮ್ ಮೋಹನ್

ಅಹಮದಾಬಾದ್: ಮುಂದಿನ 10 ವರ್ಷದಲ್ಲಿ 30 ಸಾವಿರ ವೆಚ್ಚದಲ್ಲಿ 'ಉಡಾನ್' ಯೋಜನೆಯಡಿ ದೇಶದಲ್ಲಿ ಹೊಸ 100 ಏರ್‌ಪೋರ್ಟ್‌ಗಳನ್ನು ನಿರ್ಮಿಸಲಾಗುವುದು ಎಂದು ವಿಮಾನಯಾನ ಸಚಿವ ಕೆ. ರಾಮ್‌ಮೋಹನ್ ತಿಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಮಂಗಳವಾರ ಮೂರನೇ 'ಹಬ್ ಆಯಂಡ್ ಸ್ಪೋಕ್' ಕಾರ್ಯಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

'2014 ದೇಶಲ್ಲಿ 74 ಏರ್‌ಪೋರ್ಟ್‌ಗಳಿದ್ದವು. ಈಗ ದಾಖಲೆಯ 166 ಏರ್‌ಪೋರ್ಟ್‌ಗಳಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. 12 ವರ್ಷಗಳಲ್ಲಿ ಸರಾಸರಿ 40 ದಿನಗಳಲ್ಲಿ ಹೊಸ ಏರ್‌ಪೋರ್ಟ್ ಅಥವಾ ಹೊಸ ಟರ್ಮಿನಲ್‌ ಕೆಲಸವನ್ನು ಪೂರ್ಣಗೊಳಿಸಿದ್ದೇವೆ' ಎಂದು ಹೇಳಿದ್ದಾರೆ.

'ಈ 12 ವರ್ಷಗ‌ಳು ನಾಗರಿಕ ವಿಮಾನಯಾನ ಸಚಿವಾಲಯದ ಆರಂಭವಷ್ಟೇ. ಕಳೆದ ದಶಕದಲ್ಲಿ ಉಡಾನ್ ಯೋಜನೆಯಡಿ ವಾಯುಯಾನ ವಲಯದಲ್ಲಿ ನಾವು ಕ್ರಾಂತಿಕಾರಕ ಬದಲಾವಣೆ ತಂದಿದ್ದೇವೆ. ಮುಂದಿನ 10 ವರ್ಷದಲ್ಲಿ ಹೊಸ 100 ಏರ್‌ಪೋರ್ಟ್ ನಿರ್ಮಿಸಲು ಸುಮಾರು 30 ಸಾವಿರ ವೆಚ್ಚ ಮಾಡುವ ಯೋಜನೆ ಇದೆ' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಾರ್ಚ್‌ನಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾರ್ಪಡಿಸಿದ ಉಡಾನ್ ಯೋಜನೆಗೆ ಅನುಮೋದನೆ ನೀಡಲಾಯಿತು. 2026-27ರಿಂದ 2035-36ರವರೆಗೆ 10 ವರ್ಷಗಳು ಈ ಯೋಜನೆ ಜಾರಿಯಲ್ಲಿರಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₹28,840 ಕೋಟಿ ವೆಚ್ಚ ಮಾಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries