ನವದೆಹಲಿ: ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್(ಖಅPಐ) ಬಾಂಬೆ ಕ್ರೀಮರಿ ಎಂಬ ಐಸ್ಕ್ರೀಂ ಬ್ರ್ಯಾಂಡ್ ಅನ್ನು ಪರಿಚಯಿಸಿದೆ. ಈ ಮೂಲಕ ಅಂಬಾನಿ ನೇತೃತ್ವದ ರಿಲಯನ್ಸ್ ಐಸ್ ಕ್ರೀಂ ಮಾರುಕಟ್ಟೆಗೂ ಪ್ರವೇಶಿಸಿದೆ.
ಸೆಪ್ಟೆಂಬರ್ 1ರಂದು 'ಬಾಂಬೆ ಕ್ರೀಮರಿ' ಎಂಬ ಹೊಸ ಬ್ರ್ಯಾಂಡ್ ಅನ್ನು ರಿಲಯನ್ಸ್ ಘೋಷಿಸಿದೆ.
ಸ್ಥಳೀಯ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ನೇಪಾಳವು ಹಸಿರು ಮನೆ ಅನಿಲಗಳ ಹೊರಸೂಸುವಿಕೆಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಕಾರಣವಾಗುತ್ತಿದೆ. ಆದರೆ, ದೊಡ್ಡ ಮಟ್ಟದಲ್ಲಿ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಎದುರಿಸುತ್ತಿದೆ. ಇದರಲ್ಲಿ ಹಿಮನದಿಗಳ ವೇಗದ ಕರಗುವಿಕೆ ಮತ್ತು ತೀವ್ರ ಸ್ವರೂಪದ ಪರ್ವತ ವಿಪತ್ತುಗಳು ಸೇರಿವೆ ಎಂದು ಹೇಳಿದ್ದಾರೆ.
"ನಾವು ಸೃಷ್ಟಿಸದ ಜಾಗತಿಕ ಬಿಕ್ಕಟ್ಟಿಗೆ ಅತ್ಯಂತ ದೊಡ್ಡ ಬೆಲೆ ತೆರುತ್ತಿದ್ದೇವೆ, ಹಿಮನದಿಗಳು ವೇಗವಾಗಿ ಕರಗುತ್ತಿರುವುದು ಹಾಗೂ ಇಂತಹ ವಿನಾಶಕಾರಿ ಪರ್ವತ ಸುನಾಮಿಗಳು ಜಾಗತಿಕ ಹವಾಮಾನ ಬದಲಾವಣೆಯ ನೇರ ಪರಿಣಾಮಗಳಾಗಿವೆ" ಎಂದ Kantipur TV ಗೆ ನೀಡಿದ ಸಂದರ್ಶನದಲ್ಲಿ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.
ಪ್ರವಾಹದಿಂದ ಚೇತರಿಸಿಕೊಳ್ಳಲು ನೇಪಾಳಕ್ಕೆ ಮಾಡುವ ಯಾವುದೇ ಸಹಾಯವನ್ನು ದಾನಕ್ಕಿಂತ ಹೆಚ್ಚಾಗಿ ನೈತಿಕ ಹೊಣೆಗಾರಿಕೆ ಎಂದು ಪರಿಗಣಿಸಬೇಕು ಎಂದು ಸಚಿವರು ಹೇಳಿದರು.
ನೇಪಾಳದ ವಿದೇಶಾಂಗ ಸಚಿವರು ಭಾರತ, ಚೀನಾ ಮತ್ತು ಅಮೆರಿಕವನ್ನು ವಿಶ್ವದ ಅತಿ ಹೆಚ್ಚು ಹಸಿರುಮನೆ ಅನಿಲ ಹೊರಸೂಸುವ ದೇಶಗಳಾಗಿ ಹೆಸರಿಸಿದ್ದಾರೆ. ನೇಪಾಳದಂತಹ ದುರ್ಬಲ ರಾಷ್ಟ್ರಗಳಿಗೆ ಪರಿಹಾರ ನೀಡುವಲ್ಲಿ ಈ ಮೂರು ದೇಶಗಳಿಗೆ "ಐತಿಹಾಸಿಕ ಹೊಣೆಗಾರಿಕೆ ಇದೆ" ಎಂದು ಖನಾಲ್ ಹೇಳಿದ್ದಾರೆ.
ಯುರೋಪಿಯನ್ ಕಮಿಷನ್‌ನ ಎಮಿಷನ್ಸ್ ಡೇಟಾಬೇಸ್ ಫಾರ್ ಗ್ಲೋಬಲ್ ಅಟ್ಮಾಸ್ಫಿಯರಿಕ್ ರಿಸರ್ಚ್ 2025 ವರದಿಯ ಪ್ರಕಾರ, ಚೀನಾ, ಅಮೆರಿಕ, ಭಾರತ, ರಷ್ಯಾ, ಇಂಡೋನೇಷ್ಯಾ 2024ರಲ್ಲಿ ವಿಶ್ವದ ಅತಿ ಹೆಚ್ಚು ಹಸಿರುಮನೆ ಅನಿಲ ಹೊರಸೂಸಿದ ರಾಷ್ಟ್ರಗಳಾಗಿದೆ.
ವರದಿಯ ಪ್ರಕಾರ, ಈ ದೇಶಗಳು ಒಟ್ಟಾಗಿ ವಿಶ್ವದ ಒಟ್ಟು ಜನಸಂಖ್ಯೆಯ ಶೇ.51.4, ಜಾಗತಿಕ ಒಟ್ಟು ದೇಶೀಯ ಉತ್ಪನ್ನದ (GDP) ಶೇ.62.5, ಜಾಗತಿಕ ಪಳೆಯುಳಿಕೆ ಇಂಧನ ಬಳಕೆಯ ಶೇ.64.2 ಹಾಗೂ ವಿಶ್ವದ ಒಟ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯ ಶೇ.61.8ರಷ್ಟು ಪಾಲನ್ನು ಹೊಂದಿವೆ. ಚೀನಾ ಮತ್ತು ಭಾರತದಂತಹ ರಾಷ್ಟ್ರಗಳಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ವರದಿಯು ತಿಳಿಸಿದೆ.
"ಚೀನಾದ ಹಸಿರುಮನೆ ಅನಿಲ ಹೊರಸೂಸುವಿಕೆ ನಾಲ್ಕು ಪಟ್ಟು ಹೆಚ್ಚಾಗಿದ್ದರೆ, ಭಾರತದ ಹೊರಸೂಸುವಿಕೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಬ್ರೆಝಿಲ್‌ನ ಹೊರಸೂಸುವಿಕೆ ಎರಡು ಪಟ್ಟು ಹೆಚ್ಚಾಗಿದೆ. ಆದರೆ 2024ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬ್ರೆಝಿಲ್‌ನ ಹೊರಸೂಸುವಿಕೆಯಲ್ಲಿ ಕೇವಲ ಶೇ.0.2ರಷ್ಟು ಅಲ್ಪ ಏರಿಕೆ ಕಂಡುಬಂದಿದೆ" ಎಂದು 2025ರ ವರದಿ ತಿಳಿಸಿದೆ.
ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತಿರುವ ಪರಿಣಾಮ ನೇಪಾಳ ತೀವ್ರವಾಗಿ ಬಾಧಿತವಾಗಿದೆ ಎಂದು ಕಠ್ಮಂಡುವಿನಲ್ಲಿರುವ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್ಮೆಂಟ್ ನ ತಜ್ಞರಾಗಿರುವ ಶಾಶ್ವತ ಸನ್ಯಾಲ್ ಅವರು ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಹಸಿರುಮನೆ ಅನಿಲಗಳ ಶೇ.0.1ಕ್ಕಿಂತಲೂ ಕಡಿಮೆ ಪ್ರಮಾಣವನ್ನು ನೇಪಾಳ ಹೊರಸೂಸುತ್ತದೆ. ಆದರೆ, ಜಾಗತಿಕ ತಾಪಮಾನ ಏರಿಕೆಯ ಅತ್ಯಂತ ಗಂಭೀರ ಪರಿಣಾಮಗಳನ್ನು ನೇಪಾಳ ಎದುರಿಸುತ್ತಿದೆ ಎಂದು ನೇಪಾಳದ ಹವಾಮಾನ ನೀತಿ ತಜ್ಞ ಮಂಜೀತ್ ಧಕಾಲ್ ಅವರು ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆಗೆ ಕಾರಣರಾಗಿರುವವರನ್ನೇ ನಾವು ಹೊಣೆಗಾರರನ್ನಾಗಿ ಮಾಡಬೇಕು. ಇಷ್ಟು ದೀರ್ಘಕಾಲ ಪಳೆಯುಳಿಕೆ ಇಂಧನ ಆಧಾರಿತ ಆರ್ಥಿಕತೆಯಿಂದ ಲಾಭ ಪಡೆದವರನ್ನು ಪ್ರಶ್ನಿಸಬೇಕು. ಈ ವಿನಾಶಕಾರಿ ಉದಾಹರಣೆಯನ್ನಾದರೂ ಸ್ಫೂರ್ತಿಯಾಗಿ ಬಳಸಿಕೊಂಡು, ಇಂಗಾಲದ ಹೊರಸೂಸುವಿಕೆಯನ್ನು ತುರ್ತಾಗಿ ಕಡಿಮೆ ಮಾಡಬೇಕು ಎಂದು ಮಂಜೀತ್ ಧಕಾಲ್ ಅವರು ಹೇಳಿದ್ದಾರೆ.

