ಕಠ್ಮಂಡು (PTI): ನೇಪಾಳದ ಮನಾಂಗ್ ಜಿಲ್ಲೆಯ ಹಿಮ್ಲುಂಗ್ ಹಿಮಾಲ್ ಶಿಖರದಲ್ಲಿ ಭಾನುವಾರ ಹಿಮಪಾತ ಸಂಭವಿಸಿದ್ದು, ಚಾರಣಿಗರು ಸೇರಿದಂತೆ 12 ಮಂದಿ ನಾಪತ್ತೆಯಾಗಿದ್ದಾರೆ.
ಹಿಮ್ಲುಂಗ್ ಹಿಮಾಲ್ ಶಿಖರದ ಮೂಲ ಶಿಬಿರದಲ್ಲಿ ಹಿಮಪಾತ ಸಂಭವಿಸಿದೆ. ಒಂಬತ್ತು ಚಾರಣಿಗರು ಮತ್ತು 13 ಸಹಾಯಕ ಸಿಬ್ಬಂದಿಯಿದ್ದ ಶಿಬಿರ ಹಿಮದಿಂದ ಮುಚ್ಚಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಕೆಲವು ಸಾವು-ನೋವು ಸಂಭವಿಸಿರುವ ಸಾಧ್ಯತೆಯಿದೆ. ನಾಪತ್ತೆಯಾದವರೆಲ್ಲರೂ ನೇಪಾಳದ ಪ್ರಜೆಗಳು. ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ಕಳುಹಿಸಲಾಗಿದೆ' ಎಂದು ಸಶಸ್ತ್ರ ಪೊಲೀಸ್ ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಥಾಪಾ ಹೇಳಿದ್ದಾರೆ.

