HEALTH TIPS

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ವತ್ವ:ಭಾರತವನ್ನು ಬೆಂಬಲಿಸಿದ ರಷ್ಯಾ

ವಿಶ್ವಸಂಸ್ಥೆ (PTI): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಉಮೇದುವಾರಿಕೆಯನ್ನು ರಷ್ಯಾ ಬೆಂಬಲಿಸಿದೆ.


ಆದರೆ, ಸುಧಾರಣೆಗೊಳ್ಳಲಿರುವ ಮಂಡಳಿಯಲ್ಲಿ ಹೆಚ್ಚುವರಿ ಸ್ಥಾನಗಳನ್ನು ಜರ್ಮನಿ ಹಾಗೂ ಜಪಾನ್‌ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಸೇರ್ಪಡೆಗೆ ಸಹಮತವಿಲ್ಲ ಎಂದು ತಿಳಿಸಿದೆ. 

'ಸುಧಾರಣೆಯಾಗಲಿರುವ ಮಂಡಳಿಯಲ್ಲಿ ಪಶ್ಚಿಮ ರಾಷ್ಟ್ರಗಳ ಸೇರ್ಪಡೆಗೆ ನಮ್ಮ ಬೆಂಬಲವಿಲ್ಲ. ಅದರಲ್ಲೂ ಜರ್ಮನಿ ಹಾಗೂ ಜಪಾನ್‌ ರಾಷ್ಟ್ರಗಳು ಮಿಲಿಟರೀಕರಣ ಹಾಗೂ ಪುನರುಜ್ಜೀವನದ ಹಾದಿಯಲ್ಲಿರುವ ಕಾರಣ, ಆ ರಾಷ್ಟ್ರಗಳನ್ನು ಸೇರ್ಪಡೆಗೊಳಿಸಬಾರದು. ಬದಲಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶ ನೀಡಬೇಕು' ಎಂದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್‌ ತಿಳಿಸಿದ್ದಾರೆ.

'ಭದ್ರತಾ ಮಂಡಳಿಯಲ್ಲಿ ಏಷ್ಯಾ, ಆಫ್ರಿಕಾ, ಲ್ಯಾಟಿನ್‌ ಅಮೆರಿಕಕ್ಕೆ ಪ್ರಾತಿನಿಧ್ಯ ವಿಸ್ತರಿಸುವ ಪ್ರಸ್ತಾವದ ಪರವಿದ್ದೇವೆ. ಬ್ರೆಜಿಲ್‌ ಹಾಗೂ ಭಾರತವು ಕಾಯಂ ಸದಸ್ಯತ್ವ ಹೊಂದುವ ಉಮೇದುವಾರಿಕೆಯನ್ನು ನಾವು ಬೆಂಬಲಿಸಲಿದ್ದೇವೆ. ಇದೇ ವೇಳೆ, ಆಫ್ರಿಕಾದ ಹಿತಾಸಕ್ತಿಗಳನ್ನು ಪೂರೈಸಬೇಕು ಎಂಬ ವಾದಕ್ಕೂ ನಾವು ಒತ್ತು ನೀಡುತ್ತೇವೆ' ಎಂದು ಹೇಳಿದ್ದಾರೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries