HEALTH TIPS

ಮಳೆರಾಯನ ಮುನಿಸು: ದೇಶದಲ್ಲಿ ಶೇ.14.88ರಷ್ಟು ಮುಂಗಾರು ಕೊರತೆ!

ನವದೆಹಲಿ: ಎಲ್ ನಿನೋ ವ್ಯವಸ್ಥೆ ಭಾರತದ ಮೇಲೆ ಗಂಭೀರ ಪರಿಣಾಮ ಬೀರಿದ್ದು ದೇಶದಲ್ಲಿ ಶೇ.14.88ರಷ್ಟು ಮುಂಗಾರು ಮಳೆ ಕೊರತೆಯುಂಟಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 


ದೇಶದಲ್ಲಿ ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಜೂನ್‌ 1ರಿಂದ ಸೆಪ್ಟೆಂಬರ್‌ 19ರವರೆಗೆ ದೇಶಾದ್ಯಂತ 14.88ರಷ್ಟು ಮಳೆ ಕೊರತೆ ದಾಖಲಾಗಿದ್ದು, ಒಟ್ಟು 695.6 ಮಿ.ಮೀ. ಮಳೆಯಾಗಿದೆ.

ಇದೇ ಅವಧಿಯಲ್ಲಿ ದೇಶದ ಸಾಮಾನ್ಯ ಮಳೆಯ ಪ್ರಮಾಣ 817.2 ಮಿ.ಮೀ. ಆಗಿದ್ದು, ಸಾಮಾನ್ಯಕ್ಕಿಂತ ಸುಮಾರು 121.6 ಮಿ.ಮೀ. ಕಡಿಮೆ ಮಳೆ ದಾಖಲಾಗಿದೆ ಎಂದು ವರದಿ ಹೇಳಿದೆ.

ದೇಶದ ಒಟ್ಟು 36 ಹವಾಮಾನ ಉಪವಿಭಾಗಗಳ ಪೈಕಿ 18 ಉಪವಿಭಾಗಗಳಲ್ಲಿ ಸಾಮಾನ್ಯ ಮಳೆ ದಾಖಲಾಗಿದ್ದರೆ, ಉಳಿದ 18 ಉಪವಿಭಾಗಗಳು ಮಳೆ ಕೊರತೆ ಎದುರಿಸಿವೆ.

ಅಂದರೆ, ದೇಶದ ಅರ್ಧದಷ್ಟು ಹವಾಮಾನ ಉಪವಿಭಾಗಗಳಲ್ಲಿ ಮುಂಗಾರು ಮಳೆ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಯಲಸೀಮೆಯಲ್ಲಿ ಅತಿ ದೊಡ್ಡ ಮಳೆ ಕೊರತೆ

ಪ್ರದೇಶವಾರು ಅಂಕಿ-ಅಂಶಗಳನ್ನು ಗಮನಿಸಿದರೆ ಆಂಧ್ರ ಪ್ರದೇಶದ ರಾಯಲಸೀಮೆ ಭಾಗದಲ್ಲಿ ಶೇ.50ರಷ್ಟು ಮಳೆ ಕೊರತೆ ದಾಖಲಾಗಿದ್ದು, ದೇಶದಲ್ಲೇ ಅತಿ ಹೆಚ್ಚಿನ ಕೊರತೆ ಕಂಡುಬಂದಿದೆ.

ಇದೇ ವೇಳೆ, ದೇಶದ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿದೆ. ಸೆಪ್ಟೆಂಬರ್‌ 19ರ ವೇಳೆಗೆ ದೇಶದ ಭೌಗೋಳಿಕ ಪ್ರದೇಶದ ಸುಮಾರು 43 ಪ್ರತಿಶತ ಭಾಗ ಮಳೆ ಕೊರತೆಯ ವಲಯದಲ್ಲಿದೆ ಎಂದು ವರದಿಯಾಗಿದೆ.

ಒಡಿಶಾದಲ್ಲಿ ಅಧಿಕ ಮಳೆ

ಮಳೆ ಕೊರತೆಯ ಪ್ರದೇಶಗಳ ನಡುವೆ ಒಡಿಶಾ ಉತ್ತಮ ಮಳೆ ಪಡೆದ ರಾಜ್ಯವಾಗಿ ಹೊರಹೊಮ್ಮಿದೆ. ಒಡಿಶಾದಲ್ಲಿ ಸಾಮಾನ್ಯಕ್ಕಿಂತ ಶೇ.18ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಿಂಗಳುವಾರು ಮಳೆಯಲ್ಲೂ ಏರಿಳಿತ

ಈ ಮುಂಗಾರು ಅವಧಿಯಲ್ಲಿ ತಿಂಗಳುವಾರು ಮಳೆಯಲ್ಲೂ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಜೂನ್‌ನಲ್ಲಿ ದೇಶದ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಶೇ.35.4ರಷ್ಟು ಕಡಿಮೆಯಾಗಿತ್ತು. ಜುಲೈನಲ್ಲಿ ಮಾತ್ರ ಸುಮಾರು ಶೇ.1ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು.

ಆಗಸ್ಟ್‌ನಲ್ಲಿ ಶೇ.13.8ರಷ್ಟು ಮಳೆ ಕೊರತೆ ಕಂಡುಬಂದಿದ್ದು, ಸೆಪ್ಟೆಂಬರ್‌ ತಿಂಗಳಲ್ಲೂ ಇದುವರೆಗೆ ಸುಮಾರು ಶೇ.15ರಷ್ಟು ಕೊರತೆ ದಾಖಲಾಗಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries