HEALTH TIPS

ಸಕ್ಕರೆ ದಾಸ್ತಾನು ಮಿತಿ 30 ದಿನಗಳಿಗೆ ವಿಸ್ತರಣೆ

ನವದೆಹಲಿ (PTI): ಹಬ್ಬಗಳ ಋತು ಸಮೀಪಿಸುತ್ತಿರುವುದರಿಂದ ಮತ್ತು ಸಕ್ಕರೆಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ, ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಬಳಕೆ ಮಾಡುವವರು ತಮ್ಮ ವ್ಯಾಪಾರಕ್ಕೆ ತೊಂದರೆಯಾಗದಂತೆ ಇನ್ನು ಮುಂದೆ 15 ದಿನಗಳ ಬದಲಾಗಿ 30 ದಿನಗಳಿಗೆ ಸಾಕಾಗುವಷ್ಟು ಸಕ್ಕರೆಯನ್ನು ದಾಸ್ತಾನು ಇಟ್ಟುಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಶುಕ್ರವಾರ ತಿಳಿಸಿದೆ. 


ಸದ್ಯ, ಕೈಗಾರಿಕಾ ಬಳಕೆ, ಉತ್ಪಾದನೆ ಅಥವಾ ಸ್ವಂತ ಬಳಕೆಗಾಗಿ ತಿಂಗಳಿಗೆ 10 ಟನ್‌ಗಿಂತ ಹೆಚ್ಚು ಸಕ್ಕರೆಯನ್ನು ಬಳಸುವ ದೊಡ್ಡ ಗ್ರಾಹಕರು, ತಮ್ಮ ಒಟ್ಟು ಅಗತ್ಯದ ಗರಿಷ್ಠ 15 ದಿನಗಳಿಗೆ ಸಾಕಾಗುವಷ್ಟು ದಾಸ್ತಾನನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶವಿದೆ. ಈ ಮಿತಿಯನ್ನು ಈಗ ದ್ವಿಗುಣಗೊಳಿಸಲಾಗುವುದು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ಹಿಂದಿನ 15 ದಿನಗಳ ಮಿತಿಗಿಂತ ಹೆಚ್ಚುವರಿಯಾಗಿ ಹೊಂದಿ ರುವ ಯಾವುದೇ ದಾಸ್ತಾನು ಕಡ್ಡಾಯವಾಗಿ 'ಸುಂಕ ದರ ಕೋಟಾ' ಅಥವಾ 'ಮುಂಗಡ ಪರವಾನಗಿ ಯೋಜನೆ' ಅಡಿಯಲ್ಲಿ ಆಮದು ಮಾಡಿಕೊಂಡ ಸಕ್ಕರೆಯಿಂದಲೇ ಬಂದಿರಬೇಕು ಎಂದು ಷರತ್ತು ವಿಧಿಸಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries