HEALTH TIPS

ಛಾವಣಿ ಕುಸಿದು 3 ತಿಂಗಳಾದರೂ ನಾದುರಸ್ಥಿ: ಮಳೆ-ಬಿಸಲಿಗೆ ನಾಶವಾಗುತ್ತಿರುವ ಲಕ್ಷಾಂತರ ಮೌಲ್ಯದ ಕಾಸರಗೋಡು ಸಾರೀಸ್ ಮಗ್ಗಗಳು: ಉಳಿವಿಗಾಗಿ ಹೋರಾಡುತ್ತಿರುವ ಜಿಯೋ-ಇಂಡಿಕೇಟರ್ ಸಂಸ್ಥೆ

ಕಾಸರಗೋಡು: ಭೂ-ಸೂಚಕ ಸ್ಥಾನಮಾನ ಪಡೆದ ಕಾಸರಗೋಡು ಸಾರಿ ಪರಂಪರೆಯನ್ನು ರಕ್ಷಿಸಬೇಕಾದ ನೇಯ್ಗೆ ಮಗ್ಗಗಳು ಛಾವಣಿಯಿಲ್ಲದೆ ಸಂಕಷ್ಟದ ಅಂಚಿನಲ್ಲಿರುವುದು ಗಮನಕ್ಕೆ ಬಂದಿದೆ. ವಿದ್ಯಾನಗರದ ಬಳಿಯ ಉದಯಗಿರಿಯಲ್ಲಿರುವ ಕಾಸರಗೋಡು ನೇಕಾರರ ಸಹಕಾರ ಸಂಘದ ಕಾರ್ಯನಿರತ ಶೆಡ್‍ನ ಮೇಲ್ಛಾವಣಿ ಹಾನಿಗೊಳಗಾಗಿದ್ದು, ಮೂರು ತಿಂಗಳಿಗಿಂತ ಹೆಚ್ಚು ಕಾಲ ದುರಸ್ತಿ ಮಾಡಲಾಗಿಲ್ಲ. ಇದರೊಂದಿಗೆ, ಶೆಡ್‍ನಲ್ಲಿರುವ 30 ಮಗ್ಗಗಳು ಮಳೆ-ಬಿಸಿಲಿಗೆ ಒಡ್ಡಿ ಹಾನಿಯ ಸ್ಥಿತಿಯಲ್ಲಿವೆ.


ಕಾಸರಗೋಡು ಸೀರೆ ಪರಂಪರೆ ಅಪಾಯದಲ್ಲಿ:

ಕಾಸರಗೋಡು ಸೀರೆಗೆ 2010 ರಲ್ಲಿ ಭೌಗೋಳಿಕ ಸೂಚಕ ಸ್ಥಾನಮಾನ(ಜಿಯೋ-ಇಂಡಿಕೇಟರ್) ನೀಡಲಾಯಿತು. ಆದಾಗ್ಯೂ, ಇಂದು, ಅದರ ಉತ್ಪಾದನೆಯನ್ನು ಮುಖ್ಯವಾಗಿ ಕಾಸರಗೋಡು ನೇಕಾರರ ಸಹಕಾರ ಸಂಘ ಲಿಮಿಟೆಡ್‍ನ ಉದಯಗಿರಿಯಲ್ಲಿರುವ ಏಕೈಕ ನೇಯ್ಗೆ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಸೊಸೈಟಿಯು ತನ್ನ ಸಂಸ್ಥೆಯಲ್ಲಿ ಎರಡು ಕಾರ್ಯನಿರತ ಶೆಡ್‍ಗಳನ್ನು ಹೊಂದಿದೆ.


ಮಳೆಗಾಲ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಕಾರ್ಯನಿರ್ವಹಿಸುತ್ತಿದ್ದ ಶೆಡ್‍ನ ಛಾವಣಿ ಕುಸಿದಿದೆ. ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಸೊಸೈಟಿ ಅಧಿಕೃತರು ಉಳಿದ ಟೈಲ್‍ಗಳನ್ನು ತೆಗೆದುಹಾಕಿದರು. ಆದರೆ ಛಾವಣಿ ಸಂಪೂರ್ಣವಾಗಿ ಹಾಳಾಗಿರುವುದರಿಂದ, ಮಗ್ಗಗಳನ್ನು ಸ್ಥಳಾಂತರಿಸಲು ಮತ್ತು ಸುರಕ್ಷಿತವಾಗಿ ಸಂಗ್ರಹಿಸಲು ಸ್ಥಳಾವಕಾಶವಿದ್ದಿರಲಿಲ್ಲ.

ಶೆಡ್‍ನಲ್ಲಿರುವ ಮಗ್ಗಗಳು ತೀವ್ರ ಶಾಖವನ್ನು ಎದುರಿಸುತ್ತಿವೆ. ಪ್ರಸ್ತುತ ಕಾರ್ಯಾಚರಣಾ ಕೇಂದ್ರದಲ್ಲಿ ಮಗ್ಗಗಳನ್ನು ಸಂಗ್ರಹಿಸಲು ಸಾಕಷ್ಟು ಸ್ಥಳವಿಲ್ಲ, ಅದಕ್ಕಾಗಿ ಮಗ್ಗಗಳು ಮಳೆ- ಬಿಸಿಲಿಗೆ ಒಡ್ಡಿಕೊಳ್ಳಬೇಕಾಗಿದೆ ಎಂದು ಸೊಸೈಟಿ ಉದ್ಯೋಗಿ ಪ್ರೀತಮ್ ಹೇಳಿದರು.

1990 ರ ದಶಕದಲ್ಲಿ, ಸೊಸೈಟಿಯು 80 ಮಗ್ಗಗಳನ್ನು ಹೊಂದಿತ್ತು, ಆದರೆ ಈಗ ಕೌಶಲ್ಯಪೂರ್ಣ ನೇಕಾರರ ಕೊರತೆ ಸೇರಿದಂತೆ ಕಾರಣಗಳಿಂದ ಸುಮಾರು 35 ಮಗ್ಗಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.  ಕಾಸರಗೋಡು ಸೀರೆಗಳನ್ನು ತಯಾರಿಸಲು ವಿಶೇಷ ರೀತಿಯ ಮಗ್ಗಗಳು ಅಗತ್ಯವಿದೆ.


ಕಾಸರಗೋಡು ಸೀರೆಗಳ ನೇಯ್ಗೆ ಮಗ್ಗಗಳನ್ನು ತೇಗದ ಮರದಿಂದ ತಯಾರಿಸಲಾಗುತ್ತದೆ. ಒಂದು ಮಗ್ಗವು ಮುರಿದುಹೋದರೆ, ಹೊಸ ಮಗ್ಗವನ್ನು ತಯಾರಿಸಿ ಅದನ್ನು ಬದಲಾಯಿಸುವುದು ಸುಲಭವಲ್ಲ. ಹಳೆಯ ಮಗ್ಗಗಳು ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಬಿಸಿಲು ಮುಂದುವರಿದರೆ ತೇಗದ ಮರದಿಂದ ಮಾಡಿದ ಮಗ್ಗಗಳು ಬಿರುಕು ಬಿಡುವ ಸಾಧ್ಯತೆಯಿದೆ ಎಂದು ಮಾಸ್ಟರ್ ನೇಕಾರ ಕೆ ಚಂದ್ರಶೇಖರ್ ಹೇಳಿದ್ದು, ಈ ಕಾರಣದಿಂದ ಹಳೆಯ ಮಗ್ಗಗಳನ್ನು ಯಾವ ಕಾರಣಕ್ಕೂ ಮೂಲೆಗುಂಪಾಗಿಸಲು ಸಾಧ್ಯವಿಲ್ಲ ಎಂದಿರುವರು.

ಆರ್ಥಿಕ ಬಿಕ್ಕಟ್ಟು ಮತ್ತು ನೆರವಿನ ಅಗತ್ಯ:

ಹಾನಿಗೊಳಗಾದ ಶೆಡ್ ಅನ್ನು ನವೀಕರಿಸಲು ಮೂರು ಲಕ್ಷ ರೂಪಾಯಿಗಳ ವೆಚ್ಚವಾಗುತ್ತದೆ ಎಂದು ಸೊಸೈಟಿ ಅಂದಾಜಿಸಿದೆ. ಕೈಗಾರಿಕಾ ಇಲಾಖೆಯ ಮೂಲಕ ಐದು ಲಕ್ಷ ರೂಪಾಯಿಗಳವರೆಗೆ ಸಾಲ ನೀಡುವ ಯೋಜನೆ ಇದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಕೂಡಾ ಬಳಸಲಾಗುವುದಿಲ್ಲ ಎಂದು ಸೊಸೈಟಿಯ ಮಾಜಿ ಕಾರ್ಯದರ್ಶಿ ಲೋಕನಾಥನ್ ಹೇಳಿದರು. ಎರಡು ವರ್ಷಗಳ ಹಿಂದೆ, ಸೊಸೈಟಿ ದುರಸ್ತಿಗಾಗಿ ಎಂಟು ಲಕ್ಷ ರೂಪಾಯಿಗಳ ಸಾಲವನ್ನು ಪಡೆದಿತ್ತು. ಅಸ್ತಿತ್ವದಲ್ಲಿರುವ ಹೊಣೆಗಾರಿಕೆ ಮುಂದುವರಿದಿರುವುದರಿಂದ ಮತ್ತೊಂದು ಸಾಲವನ್ನು ತೆಗೆದುಕೊಳ್ಳುವುದು ಪ್ರಾಯೋಗಿಕವಲ್ಲ ಎಂಬುದು ಸೊಸೈಟಿಯ ನಿಲುವು.

ಸಮಸ್ಯೆಗೆ ಪರಿಹಾರ ಕೋರಿ ಸೊಸೈಟಿಯು ಕಾಸರಗೋಡು ಜಿಲ್ಲಾಡಳಿತ ಮತ್ತು ಕಾಸರಗೋಡು ಶಾಸಕರಿಗೆ ಮನವಿಯನ್ನು ಸಲ್ಲಿಸಿದೆ. ಶೆಡ್ ನವೀಕರಣಕ್ಕಾಗಿ ವಿಶೇಷ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಲಾಗಿದೆ.


ಅಭಿಮತ:

-ಇಲ್ಲಿಯ ಮಗ್ಗಗಳು ತೇಗದಿಂದ ನಿರ್ಮಿಸಿದ ವೈಶಿಷ್ಟ್ಯಪೂರ್ಣ ಮಹತ್ವಿಕೆ ಹೊಂದಿದೆ. ಗುಣಮಟ್ಟದ ಮರ ಮತ್ತು ಅದರ ಕೆಲಸಗಳು ದುರ್ಲಬವಾದ ಕಾರಣ ಹೊಸ ಮಗ್ಗ ತಯಾರಿಸುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಹಳೆಯ ಮಗ್ಗದ ಸಂರಕ್ಷಣೆ ತುರ್ತು ಅಗತ್ಯವಿದೆ. ಕುಸಿದ ಛಾವಣಿ ದುರಸ್ಥಿಗೊಳಿಸಿ ಮಗ್ಗದ ಸುಸ್ಥಿತಿಗೆ ಮುಂದಾಗಬೇಕು. ಈ ಬಗ್ಗೆ ಅಧಿಕೃತರಿಗೆ ಮನವಿ ನೀಡಲಾಗಿದೆ.

-  ಕೆ ಚಂದ್ರಶೇಖರ್.

ಮಾಸ್ಟರ್ ನೇಕಾರ. ಕಾಸರಗೋಡು ಸಾರೀಸ್. ಉದಯಗಿರಿ. ವಿದ್ಯಾನಗರ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries