HEALTH TIPS

ಸೆ.19ರಿಂದ ಏಶ್ಯನ್ ಗೇಮ್ಸ್ | ಪದಕ ಗಳಿಕೆಯಲ್ಲಿ ಮತ್ತೊಮ್ಮೆ ಶತಕ ಗಳಿಸುವ ವಿಶ್ವಾಸದಲ್ಲಿ ಭಾರತ

ನವದೆಹಲಿ: ಒಂದೇ ವೇದಿಕೆಯಲ್ಲಿ ಏಶ್ಯದ ದೇಶಗಳನ್ನು ಕ್ರೀಡೆಯ ಮೂಲಕ ಒಂದಾಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾದ ಏಶ್ಯನ್ ಗೇಮ್ಸ್‌ಗೆ ಈಗ 75 ವರ್ಷ. ಏಶ್ಯದ ಅತಿದೊಡ್ಡ ಬಹು ಕ್ರೀಡಾಕೂಟದ ಪಯಣ ಆರಂಭವಾಗಿದ್ದು ಭಾರತದಲ್ಲಿ ಎಂಬುದು ವಿಶೇಷವಾಗಿದೆ.


2026ರ ಆವೃತ್ತಿಯ ಏಶ್ಯನ್ ಗೇಮ್ಸ್ ಕ್ರೀಡಾಕೂಟವು ಜಪಾನ್‌ನ ಐಚಿ ಪ್ರಿಫೆಕ್ಚರ್ ಹಾಗೂ ನಗೋಯಾ ನಗರಗಳಲ್ಲಿ ಸೆ.19ರಿಂದ ಅಕ್ಟೋಬರ್ 4ರ ತನಕ ನಡೆಯಲಿದೆ.

1951ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಮೊದಲ ಏಶ್ಯನ್ ಗೇಮ್ಸ್ ಇಂದು ವಿಶ್ವದ ಪ್ರಮುಖ ಬಹು ಕ್ರೀಡಾಕೂಟಗಳಲ್ಲಿ ಒಂದಾಗಿ ಬೆಳೆದು ನಿಂತಿದೆ.

20ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಭಾರತವು 100ಕ್ಕೂ ಅಧಿಕ ಪದಕಗಳನ್ನು ಗೆಲ್ಲುವ ಅದಮ್ಯ ವಿಶ್ವಾಸದಲ್ಲಿದೆ. ಭಾರತವು ಮೂರು ವರ್ಷಗಳ ಹಿಂದೆ ಚೀನಾದ ಹಾಂಗ್‌ಝೌನಲ್ಲಿ ಒಟ್ಟು 107 ಪದಕಗಳನ್ನು ಜಯಿಸಿತ್ತು. 2018ರ ಜಕಾರ್ತ ಗೇಮ್ಸ್(70 ಪದಕ)ಗಿಂತ ಉತ್ತಮ ಪ್ರದರ್ಶನ ನೀಡಿತ್ತು. ಏಶ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿ ಪದಕ ಗಳಿಕೆಯಲ್ಲಿ ಶತಕದ ಗಡಿ ದಾಟಿದ್ದ ಭಾರತವು ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾದೊಂದಿಗೆ ಸ್ಥಾನ ಪಡೆದಿತ್ತು.

ಭಾರತ ತಂಡವು 2036ರಲ್ಲಿ ಬೇಸಿಗೆ ಒಲಿಂಪಿಕ್ಸ್ ಆತಿಥ್ಯವಹಿಸುವ ಮೂಲಕ ಈ ಸಾಧನೆ ಮಾಡಿದ ಏಶ್ಯದ ನಾಲ್ಕನೇ ದೇಶ ಎನಿಸಿಕೊಂಡು ಚೀನಾ, ಜಪಾನ್ ಹಾಗೂ ಕೊರಿಯಾದ ದಾಖಲೆ ಸರಿಗಟ್ಟುವ ಗುರಿಯನ್ನು ಇಟ್ಟುಕೊಂಡಿದೆ.

''ನಮ್ಮ ಗುರಿ 2036, ಆ ಸಮಯದಲ್ಲಿ ನಾವು ಒಲಿಂಪಿಕ್ಸ್ ಆಯೋಜಿಸಲಿದ್ದು, ವಿಶ್ವ ಮಟ್ಟದಲ್ಲಿ ನಮ್ಮ ಸ್ಥಾನವನ್ನು ಗಟ್ಟಿಪಡಿಸುವ ಅಗತ್ಯವಿದೆ. ಈ ಬಾರಿಯ ಏಶ್ಯನ್ ಗೇಮ್ಸ್‌ನಲ್ಲಿ ನಮ್ಮ ಅತ್ಲೀಟ್‌ಗಳು ಉತ್ತಮ ಪ್ರದರ್ಶನದೊಂದಿಗೆ ದೇಶಕ್ಕೆ ಹೆಮ್ಮೆ ತರುವ ಕುರಿತು ನನಗೆ ಸಂಪೂರ್ಣ ವಿಶ್ವಾಸವಿದೆ'' ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಹೇಳಿದ್ದಾರೆ.

ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಅನುಪಸ್ಥಿತಿಯ ನಡುವೆಯೂ ಸತತ ಎರಡನೇ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ 100ಕ್ಕೂ ಅಧಿಕ ಪದಕಗಳ ಗೆಲ್ಲುವತ್ತ ಭಾರತ ತಂಡ ಚಿತ್ತಹರಿಸಿದೆ. ಏಶ್ಯನ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನದ ಮೇಲೆ ಕಣ್ಣಿಟ್ಟಿದ್ದ ಚೋಪ್ರಾ ಸದ್ಯ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

2026ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತ

ಒಟ್ಟು ಕ್ರೀಡೆಗಳು: 36

ಒಟ್ಟು ಅತ್ಲೀಟ್‌ಗಳು: 497

ಪುರುಷ ಅತ್ಲೀಟ್‌ಗಳು: 265, ಮಹಿಳಾ ಅತ್ಲೀಟ್‌ಗಳು:232

ಮೊದಲ ಬಾರಿ ಸ್ಪರ್ಧಿಸುತ್ತಿರುವ ಒಟ್ಟು ಅತ್ಲೀಟ್‌ಗಳು: 307

ಭಾರತ ಸ್ಪರ್ಧಿಸುತ್ತಿರುವ ಒಟ್ಟು ಪದಕಗಳು: 356

ಅತ್ಯಂತ ಹಿರಿಯ ಭಾರತೀಯ ಅತ್ಲೀಟ್: ಶ್ರುತಿ ವೋರಾ(55 ವರ್ಷಗಳು)

ಅತ್ಯಂತ ಕಿರಿಯ ಭಾರತೀಯ ಅತ್ಲೀಟ್: ವೈಭವ್ ಸೂರ್ಯವಂಶಿ(15 ವರ್ಷ)







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries