ಲಕ್ನೋ: 2004ರಲ್ಲಿ ಗೂಢಚಾರಿಕೆ ಜಾಲದ ಭಾಗವಾಗಿದ್ದ ಆರೋಪದಲ್ಲಿ ಒಂದು ವರ್ಷ ಜೈಲು ವಾಸ ಅನುಭವಿಸಿದ್ದ ವ್ಯಕ್ತಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಗ್ರಾದ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.
ಜಮೀಲ್ ಅಹ್ಮದ್ (50) ಜಾಮೀನಿನ ಮೇಲೆ ಹೊರಗಿದ್ದು, ವಂಚನೆ ಮತ್ತು ಅಪರಾಧಿಕ ಪಿತೂರಿ ಆರೋಪಗಳನ್ನು ಎದುರಿಸುತ್ತಿದ್ದ.
ಪೊಲೀಸ್ ವಶದಲ್ಲಿದ್ದ ಇಬ್ಬರು ಶಂಕಿತ ಪಾಕಿಸ್ತಾನದ ಏಜೆಂಟ್‌ಗಳು ಅಹ್ಮದ್ ಹೆಸರನ್ನು ಹೇಳಿದ್ದರು. 2004ರಲ್ಲಿ ಪೊಲೀಸರು 'ಸೂಕ್ಷ್ಮ ಮಿಲಿಟರಿ ಮಾಹಿತಿ'ಯನ್ನು ಹೊಂದಿರುವ ಸಿಡಿಯೊಂದನ್ನು ಅಹ್ಮದ್ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು. ಆದರೆ, ಅಹ್ಮದ್ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆೆ.
ಪ್ರಮುಖ ಸಾಕ್ಷ್ಯವಾಗಿದ್ದ ಆ ಸಿಡಿಯನ್ನು ತನ್ನೆದುರು ಹಾಜರುಪಡಿಸಿದಾಗ ತುಂಡಾಗಿತ್ತು ಎಂದು ನ್ಯಾಯಾಲಯ ಗಮನಿಸಿದೆ.

