24 ವಾರ ಮೀರಿದ ಭ್ರೂಣದ ಗರ್ಭಪಾತಕ್ಕೆ ಅನುಮತಿ ಕೇಳಿದ್ದ 11 ವರ್ಷದ ಬಾಲಕಿಯ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿತು.
ನ್ಯಾಯಮೂರ್ತಿ ವಾಸಿಂ ಸಾದಿಕ್ ನರ್ಗಾಲ್ ಅವರು, ಗರ್ಭಪಾತಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೆ.22ರಂದು ಸೂಚಿಸಿದರು.
ಈ ಪ್ರಕರಣವು ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಗರ್ಭಪಾತದ 24 ವಾರಗಳ ಶಾಸನಬದ್ಧ ಮಿತಿಯನ್ನು ಮೀರಬಹುದೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸೆಪ್ಟೆಂಬರ್ 11ರಂದು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದ ಬಹುಶಿಸ್ತೀಯ ವೈದ್ಯಕೀಯ ಮಂಡಳಿಯು, 'ಗರ್ಭಪಾತ ಮಾಡಬಹುದಾಗಿದೆ. ಬಾಲಕಿಯು ದೈಹಿಕ ಮತ್ತು ಮಾನಸಿಕವಾಗಿ ಸದೃಢಳಾಗಿದ್ದಾಳೆ' ಎಂದು ವರದಿ ನೀಡಿತ್ತು. ರಕ್ತಸ್ರಾವ, ಸೋಂಕು ಉಂಟಾಗುವ ಸಾಧ್ಯತೆ ಇದೆ ಎಂದೂ ಎಚ್ಚರಿಸಿತ್ತು. ಸೆಪ್ಟೆಂಬರ್ 22ಕ್ಕೆ ಬಾಲಕಿಯ ಭ್ರೂಣಕ್ಕೆ 24 ವಾರ ಮತ್ತು ಎರಡು ದಿನಗಳಾಗಿವೆ.

