HEALTH TIPS

ಸೆಪ್ಟೆಂಬರ್ 26ರಿಂದ 30ರ ವರೆಗೆ ದೇಶವ್ಯಾಪಿ ಬ್ಯಾಂಕ್‌ಗಳು ಬಂದ್‌: ಯಾವೆಲ್ಲಾ ಸೇವೆಗಳು ಲಭ್ಯ?

 ನವದೆಹಲಿ: ಸೆಪ್ಟೆಂಬರ್ 28 ರಿಂದ 30ರ ವರೆಗೆ ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗಾಗಿ ಸಲಹೆ ನೀಡಿದೆ.


ಮುಷ್ಕರದ ಅವಧಿಯಲ್ಲಿ ಬ್ಯಾಂಕ್ ಶಾಖೆಗಳಿಗೆ ಸಂಬಂಧಿಸಿದ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಅಗತ್ಯವಿರುವ ಶಾಖಾ ಸಂಬಂಧಿತ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚಿಸಿದೆ.

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಈ ಮುಷ್ಕರಕ್ಕೆ ಕರೆ ನೀಡಿದೆ. ಸೆಪ್ಟೆಂಬರ್ 11ರಂದು ಯುಎಫ್‌ಬಿಯು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ ಬಳಿಕ ಈ ಸಲಹೆ ಹೊರಬಂದಿದ್ದು, ಈ ತಿಂಗಳ ಕೊನೆಯಲ್ಲಿ ಮತ್ತೊಂದು ಹಂತದ ಪ್ರತಿಭಟನಾ ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಮುಂದುವರಿದ ಹೋರಾಟದ ಭಾಗವಾಗಿ ಅಕ್ಟೋಬರ್ 26ರಿಂದ ನಿರಂತರ ಮುಷ್ಕರ ನಡೆಸುವುದಾಗಿಯೂ ಒಕ್ಕೂಟ ಘೋಷಿಸಿದೆ.

ಸೆ.26ರಿಂದ ಸೆ.30ರವರೆಗೆ ದೇಶವ್ಯಾಪಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸೋದಿಲ್ಲ. ಇದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಲಿದೆ. ಸೆ.26 ನಾಲ್ಕನೇ ಶನಿವಾರ ಮತ್ತು ಸೆ.27 ಭಾನುವಾರದ ನಿಮಿತ್ತ ರಜಾ ಇರಲಿದೆ. ಸೆ.28ರಿಂದ ಸೆ.30ರವರೆಗೆ ಮೂರು ದಿನ ಬ್ಯಾಂಕ್‌ ಸಿಬ್ಬಂದಿ ಮುಷ್ಕರ ನಡೆಯಲಿದೆ.

3 ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್‌ಗಳ ಮುಷ್ಕರ ಇರೋದ್ರಿಂದ ಗ್ರಾಹಕರಿಗೆ SBI ಸಲಹೆ ನೀಡಿದೆ. ತಮ್ಮ ಶಾಖೆಗಳಿಗೆ ಸಂಬಂಧಿಸಿದ ಪ್ರಮುಖ ಬ್ಯಾಂಕಿಂಗ್ ವಹಿವಾಟುಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವಂತೆ SBI ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.

ಸೆಪ್ಟೆಂಬರ್ 11 ರಂದು UFBU ನಡೆಸಿದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಬಳಿಕ ಈ ತಿಂಗಳ ಕೊನೆಯಲ್ಲಿ ಮತ್ತೊಂದು ಹಂತದ ಪ್ರತಿಭಟನೆಗೆ ಮುಂದಾಗಿರುವ ಹಿನ್ನಲೆಯಲ್ಲಿ SBIನ ಈ ಸಲಹೆಯನ್ನು ಬಂದಿದ್ದು, ಈ ಪ್ರಕಟಣೆಯು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಥವಾ ಬ್ಯಾಂಕ್ ಉದ್ಯೋಗಿಗಳ ಸಹಾಯದ ಅಗತ್ಯವಿರುವ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಅನ್ವಯಿಸಲಿದೆ.

ಬ್ಯಾಂಕ್‌ ಮುಷ್ಕರದ ವೇಳೆ ಗ್ರಾಹಕರು ಎಟಿಎಂಗಳು ಮತ್ತು ಸ್ವಯಂಚಾಲಿತ ಠೇವಣಿ ಮತ್ತು ಹಿಂಪಡೆಯುವಿಕೆ ಯಂತ್ರಗಳನ್ನು (ADWMs) ನಗದು ಹಿಂಪಡೆಯುವಿಕೆ ಮತ್ತು ಇತರ ಅರ್ಹ ಸೇವೆಗಳಿಗಾಗಿ ಬಳಸಬಹುದು. ಗ್ರಾಹಕ ಸೇವಾ ಕೇಂದ್ರಗಳನ್ನ ಬಳಸಬಹುದಾದರೂ, ಅದರಲ್ಲಿ ಆಯ್ದ ಬ್ಯಾಂಕಿಂಗ್‌ ಸೇವೆಗಳು ಮಾತ್ರ ಲಭ್ಯ ಇರುತ್ತವೆ. ದಿನನಿತ್ಯದ ವಹಿವಾಟುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವ ಸಾಧ್ಯತೆಯಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries