ಉಪ್ಪಳ: ಪೈವಳಿಕೆ ಕಾಯರ್ಕಟ್ಟೆ ಸರ್ಕಾರಿ ಉನ್ನತ ಪ್ರೌಢ ಶಾಲೆಯ ವಾರ್ಷಿಕ ಎರಡು ದಿನಗಳ ಕ್ರೀಡಾಕೂಟ 'ಅಥ್ಲೆಟಿಕಾ-26'ಸಂಪನ್ನಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾದ್ ವರ್ಕಾಡಿ ದೀಪಶಿಕಾ ಪ್ರಜ್ವಲನೆಗೊಳಿಸುವ ಮೂಲಕ ಕ್ರೀಡಾ ಕೂಟ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಸಾಮಥ್ರ್ಯವನ್ನು ವೃದ್ಧಿಸುವುದರ ಜೊತೆಗೆ ಶಿಸ್ತು, ಸಹನೆ ಹಾಗೂ ಒಗ್ಗಟ್ಟಿನ ಮನೋಭಾವವನ್ನು ಬೆಳೆಸುತ್ತದೆ. ಗೆಲುವು-ಸೋಲಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವವೇ ವಿದ್ಯಾರ್ಥಿಗಳ ನಿಜವಾದ ಗೆಲುವು ಎಂದು ಅಭಿಪ್ರಾಯಪಟ್ಟರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಆದಂ ಬಳ್ಳೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಎಂ. ಬಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಶ್ರೀ ಡೊಮಿನಿಕ್ ಅಗಸ್ಟಿನ್, ಪಿಟಿಎ ಉಪಾಧ್ಯಕ್ಷ ಸದಸ್ಯ ಖಲೀಲ್ ಚಿಪ್ಪಾರ್, ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಪೆರ್ವೋಡಿ ಹಾಗೂ ಅಧ್ಯಾಪಕಿ ಬೇಬಿ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧೆಗಳಿಗೆ ತರಬೇತಿಗೊಳಿಸಿದ ನಿವೃತ್ತ ದೈಹಿಕ ಶಿಕ್ಷಕ ಕೆ ಎಂ ಬಲ್ಲಾಲ್ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ಸ್ವಾಗತಿಸಿದರು. ಅಶ್ರಫ್ ಮತ್ರ್ಯ ನಿರೂಪಿಸಿದರು. ಶಿಕ್ಷಕ ಪೃಥ್ವೀರಾಜ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.



