HEALTH TIPS

ಕೊಡ್ಯಮೆ ನುಸ್ರತುಲ್ ಇಸ್ಲಾಂ ಸಂಘದ ವಾರ್ಷಿಕ, ಮಿಲಾದ್ ಮೆಹಫಿಲ್ ಆರಂಭ

ಕುಂಬಳೆ: ಕೊಡ್ಗಮ್ಮೆ ನುಸ್ರತುಲ್ 'ಇಸ್ಲಾಂ ಸಂಘದ 24ನೇ ವಾರ್ಷಿಕದಂಗವಾಗಿ ನಿನ್ನೆಯಿಂದ 13ರ ವರೆಗೆ ಕೊಡಮೆ ತ್ವಾಹ ನಗರದಲ್ಲಿ ಮೆಹಫಿಲ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕೆ. ಹಂಸ ಉಸ್ತಾದ್ ಪುರಸ್ಕಾರ ವಿತರಣೆಯೂ ನಡೆಯಲಿದೆ. ನಿನ್ನೆ ಮಧ್ಯಾಹ್ನ ಮಖಾಂ ಸಿಯಾರತ್ ನಡೆದಿದ್ದು, ಸಂಜೆ 4 ಗಂಟೆಗೆ ಅಧ್ಯಕ್ಷ ಅಶ್ರಫ್ ಕೊಡಮೆ ಧ್ವಜಾರೋಹಣಗೈದರು. ಇಂದು ಸಂಜೆ 4 ಗಂಟೆಗೆ 25 ಮದ್ರಸಗಳ ವಿದ್ಯಾರ್ಥಿಗಳು ಭಾಗವಹಿಸುವ ಸ್ಕಾಟ್ ಆಂಡ್ ಫ್ಲವರ್ ಶೋದೊಂದಿಗೆ - ಮಿಲಾದ್ ಸಂದೇಶ ರ್ಯಾಲಿ ನಡೆಯಲಿದೆ. ರಾತ್ರಿ 7 ಗಂಟೆಗೆ ಮುಹಮ್ಮದ್ - ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಕೊಡ್ಯಮೆ ಖತೀಬ್ 5 ಮೆಹಮೂದ್ ಸಅದಿ ಪ್ರಾರ್ಥನೆ ನಡೆಸುವರು. ಅಬೂಬಕ್ಕರ್ ಸಾಲೂದ್ ನಿಸಾಮಿ ಅಧ್ಯಕ್ಷತೆ ವಹಿಸುವರು. ಬಳಿಕ ದಫ್ ಸ್ಪರ್ಧೆ ನಡೆಯಲಿದೆ. 13 ರಂದು 5 ಬೆಳಿಗ್ಗೆ 9 ಗಂಟೆಗೆ 25 ಮದ್ರಸಗಳಿಂದಾಗಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಪ್ರವಾದಿ ಪ್ರಕೀರ್ತನಾ ಸದಸ್ ನಡೆಯಲಿದೆ. ರಾತ್ರಿ 7ಕ್ಕೆ 24ನೇ ವಾರ್ಷಿಕ ಸಮ್ಮೇಳನ, ಮಿಲಾದ್

ಮೆಹಫಿಲ್ ಸಮಾರೋಪ, ಪುರಸ್ಕಾರ ಪ್ರದಾನ ನಡೆಯಲಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಸಮ್ಮೇಳನ ಉದ್ಘಾಟಿಸುವರು. ಅಬ್ದುಲ್ ಮಜೀದ್ ಫೈಸಿ ಕೊಡಮೆ ಪ್ರಾರ್ಥನೆ ನಡೆಸುವರು. ಅಶ್ರಫ್ ಕೊಡಮ್ಮೆ ಅಧ್ಯಕ್ಷತೆ ವಹಿಸುವರು. 

ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಾಹುಲ್ ಹಮೀದ್ ಸಅದಿ, ಅಬ್ದುಲ್ ರಹಿಮಾನ್ ಅದ್ರಿ, ಸಿದ್ದೀಕ್ ಉಜಾರ್, ಯೂಸಫ್ ಕೊಡ್ಯಮೆ, ಫೈಸಲ್ ಉಜಾರ್, ಬಶೀರ್ ಮಡವರ ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries