HEALTH TIPS

'ಆಪರೇಷನ್ ತೂಫಾನ್' ಮಾದಕ ದ್ರವ್ಯ ವಿರೋಧಿ ಅಭಿಯಾನ 2.o, ಪ್ರತಿಜ್ಞಾವಿಧಿ ಬೋಧನೆ


ಕಾಸರಗೋಡು
: ಜನಸೇನಾ ನೇತೃತ್ವದ 'ಆಪರೇಷನ್ ತೂಫಾನ್' ಮಾದಕ ದ್ರವ್ಯ ವಿರೋಧಿ ಅಭಿಯಾನದ ಎರಡನೇ ಹಂತದ 'ತೂಫಾನ್ ತದ್ದೇಶಂ' (ಸ್ಥಳೀಯ ಬಿರುಗಾಳಿ) ಕಾಸರಗೋಡು ಬ್ಲಾಕ್ ಮಟ್ಟದ ಕಾರ್ಯಕ್ರಮ ನಡೆಯಿತು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ ಉದ್ಘಾಟಿಸಿದರು.  ಉಪಾಧ್ಯಕ್ಷೆ ಉಷಾ ಅರ್ಜುನನ್ ಅಧ್ಯಕ್ಷತೆ ವಹಿಸಿದ್ದರು.

ನಾರ್ಕೋಟಿಕ್ ಸೆಲ್ ಡಿವೈಎಸ್‍ಪಿ ಡಾ. ವಿ. ಬಾಲಕೃಷ್ಣನ್ ಅವರು ಭಾಗವಹಿಸಿದವರಿಗೆ 'ತೂಫಾನ್' ಬ್ಯಾಡ್ಜ್ ವಿತರಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಎಸ್. ಮೊಯ್ದು,  ಬ್ಲಾಕ್ ಪಂಚಾಯತ್ ಸದಸ್ಯರಾದ ಸಿ.ವಿ. ಜೇಮ್ಸ್, ಅನ್ವರ್ ಕೋಳಿಯಡ್ಕ,  ಮಹೇಶ್ ವಳಕುಂಜ, ನಿವೃತ್ತ ಎಸ್‍ಪಿ ಟಿ.ಪಿ. ರಂಜಿತ್ ಉಪಸ್ಥಿತರಿದ್ದರು.   ಕಾಸರಗೋಡು ನಗರ ಠಾಣೆ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಪಿ.ವಿ. ಮನು ಅವರು 'ತೂಫಾನ್' ಕುರಿತು ಜಾಗೃತಿ ತರಗತಿ ನಡೆಸಿದರು.  ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಅಶ್ರಫ್ ಕಾರ್ಲ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಪಿ. ಪೀತಾಂಬರನ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries