ಪೆರ್ಲ: ಪೆರ್ಲ ಶ್ರೀ ಸಾರ್ವಜನಿಕ ಗಣೇಶೋತ್‍ಸವ ಸಮಿತಿ ವತಿಯಿಂದ 55ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮದ ಮೆರವಣಿಗೆ ಮಂಗಳವಾರ ನಡೆಯಿತು. ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಮಧ್ಯಾಹ್ನ ಮಹಾಪೂಜೆಯೊಂದಿಗೆ ಆರಂಭಗೊಂಡ ಮೆರವಣಿಗೆ ಪೆರ್ಲದ ಅಶ್ವತ್ಥಕಟ್ಟೆಯಲ್ಲಿ ವಿಶೇಷ ಪೂಜೆ ನಡೆದ ಬಳಿಕ ಪೆರ್ಲ ಚೆಕ್‍ಪೋಸ್ಟ್, ಕೆಕೆ ರಸ್ತೆಯ ಬದಿ ದೈವಸ್ಥಾನ, ಪೆರ್ಲ ಶ್ರೀ ಅಯ್ಯಪ್ಪ ಮಂದಿರದಲ್ಲಿವಿಶೇಷ ಪೂಜೆಯ ನಂತರ ಅಡ್ಕಸ್ಥಳ ಹೊಳೆಯಲ್ಲಿ ವಿಗ್ರಹದ ವಿಸರ್ಜನೆ ನಡೆಯಿತು. ಮೆರವಣಿಗೆಯುದ್ದಕ್ಕೂ, ವಿಶಿಷ್ಟ ಚೆಂಡೆಮೇಳ, ಕುಣಿತ ಭಜನೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.


