HEALTH TIPS

'All set for BRICS 2026!': ಶೃಂಗಸಭೆಗೆ ಸಿದ್ಧತೆಯ ವಿಡಿಯೊ ಹಂಚಿಕೊಂಡ ಮೋದಿ

ನವದೆಹಲಿ: ಬ್ರಿಕ್ಸ್ ಶೃಂಗಸಭೆಗೆ ನವದೆಹಲಿ ಸಜ್ಜಾಗಿದ್ದು, ಅಲಂಕೃತ ಭಾರತ ಮಂಟಪ, ಸಿದ್ಧತೆಯ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾನಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

30 ಸೆಕೆಂಡುಗಳ ಈ ವಿಡಿಯೊದಲ್ಲಿ ಆಕರ್ಷಕ ಬ್ಯಾಗ್ರೌಂಡ್ ಮ್ಯೂಸಿಕ್ ಕೇಳಿಸುತ್ತಿದೆ.


ಬ್ರಿಕ್ಸ್ 2026ಕ್ಕೆ ಎಲ್ಲವೂ ಸಿದ್ಧವಾಗಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 12-13ರಂದು ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶೃಂಗಸಭೆಗೆ ಅಲಂಕೃತವಾಗಿರುವ ಮಧ್ಯ ದೆಹಲಿಯ ವಿಶಾಲ ಸಂಕೀರ್ಣ ಭಾರತ ಮಂಟಪದ ದೃಶ್ಯಗಳನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

2023ರ ಜುಲೈನಲ್ಲಿ ಮೋದಿ, ಭಾರತ ಮಂಟಪ ಸಂಕೀರ್ಣವನ್ನು ಉದ್ಘಾಟಿಸಿದ್ದರು. ಭಾರತವು ಶೃಂಗಸಭೆಯ ಸಿದ್ಧತಾ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡುತ್ತಿದೆ.

ಈ ನಡುವೆ, ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು, ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಚೀನಾ ದೃಢಪಡಿಸಿದೆ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಶೃಂಗಸಭೆಯಲ್ಲಿ ಭಾಗವಹಿಸುವ ಪ್ರಮುಖ ನಾಯಕರಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯುತ್ತಿದ್ದು, ಭಾರತ ಮಂಟಪ ಸಂಕೀರ್ಣದ ಬಳಿಯ ಮುಖ್ಯ ರಸ್ತೆಯನ್ನು ಅಲಂಕರಿಸಲಾಗಿದ್ದು, ಹಲವು ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ.

ಮೋದಿ ಹಂಚಿಕೊಂಡಿರುವ ವಿಡಿಯೊ ಪೋಸ್ಟ್‌ನಲ್ಲಿ, ಭಾರತ ಮಂಟಪ ಸಂಕೀರ್ಣದ ವಾಸ್ತುಶಿಲ್ಪ, ವಿನ್ಯಾಸ, ಅಲಂಕಾರ, ಶೃಂಗಸಭೆಯ ಸಭಾಂಗಣ, ಸಭೆ ಕೊಠಡಿಗಳು, ಮುಖ್ಯ ಕಟ್ಟಡದ ಮುಂದೆ ಸ್ಥಾಪಿಸಲಾದ ಎತ್ತರದ ನಟರಾಜ ಪ್ರತಿಮೆ ಹಾಗೂ ಭಾರತ ಮತ್ತು ಇತರ ದೇಶಗಳ ಧ್ವಜಗಳನ್ನು ಕಾಣಬಹುದಾಗಿದೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿದ್ದ ಬ್ರಿಕ್ಸ್ ಒಕ್ಕೂಟಕ್ಕೆ 2024ರಲ್ಲಿ ಈಜಿಪ್ಟ್, ಇಥಿಯೋಪಿಯ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ಸೇರಿಸಲಾಯಿತು. 2025ರಲ್ಲಿ ಇಂಡೋನೇಷ್ಯಾವನ್ನು ಸೇರಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries