HEALTH TIPS

Asian Games | ಪದಕ ಖಚಿತಪಡಿಸಿದ ಸುಚಿಕಾ, ಹಾಕಿ ಅಭಿಯಾನ ಆರಂಭ

ನಗೋಯ: ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಫೈಟರ್ ಸುಚಿಕಾ ತರಿಯಾಲ್ ಮಹಿಳೆಯರ ಸಾಂಪ್ರದಾಯಿಕ ಎಂಎಂಎ 60 ಕೆಜಿ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ತಲುಪುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದರು.


36ರ ವಯಸ್ಸಿನ ಸುಚಿಕಾ ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ಅಲ್ಟಾಚಿಮೆಗ್‌ರನ್ನು 2-0 ಅಂತರದಿಂದ ಮಣಿಸಿದರು.  ಇದರೊಂದಿಗೆ ಭಾರತಕ್ಕೆ ಕನಿಷ್ಠ ಕಂಚಿನ ಪದಕ ದೃಢಪಡಿಸಿದರು.

ಏಶ್ಯನ್ ಗೇಮ್ಸ್‌ನಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದು, ಸುಚಿಕಾ ಈ ಹಿಂದೆ ಜುಡೋದಲ್ಲಿ ಸ್ಪರ್ಧಿಸಿದ್ದರು. 2024ರಲ್ಲಿ ಎಂಎಂಎಗೆ ಒಲವು ತೋರಿದ್ದರು. ಈ ವರ್ಷಾರಂಭದಲ್ಲಿ ಏಶ್ಯನ್ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಭಾರತದ ಹಾಕಿ ಅಭಿಯಾನವು ರವಿವಾರ ಆರಂಭವಾಗಿದೆ. ಮಹಿಳೆಯರ ತಂಡವು ತನ್ನ ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ ತಂಡವನ್ನು 19-0 ಗೋಲುಗಳಿಂದ ಮಣಿಸಿತು. ಪುರುಷರ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ಇಂಡೋನೇಶ್ಯವನ್ನು 13-1 ಅಂತರದಿಂದ ಮಣಿಸಿದೆ. ದಿಲ್‌ಪ್ರೀತ್ ಸಿಂಗ್ ನಾಲ್ಕು ಗೋಲುಗಳನ್ನು ಗಳಿಸಿದರು.

ಗೆಲುವಿನ ಆರಂಭ ಪಡೆದ ಶಟ್ಲರ್‌ಗಳು

ಪಿವಿ ಸಿಂಧು, ಉನ್ನತಿ ಹೂಡಾ ಹಾಗೂ ತನ್ವಿ ಶರ್ಮಾ ಅವರನ್ನೊಳಗೊಂಡ ಭಾರತ ತಂಡವು ಮಹಿಳೆಯರ ತಂಡ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಝಕ್‌ಸ್ತಾನದ ವಿರುದ್ಧ 3-0 ಅಂತರದಿಂದ ಜಯಶಾಲಿಯಾಗಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.

ಸಿಂಧು 24 ನಿಮಿಷಗಳಲ್ಲಿ ಕಮಿಲಾ ವಿರುದ್ಧ 21-7, 21-8 ನೇರ ಗೇಮ್‌ಗಳಿಂದ ಜಯ ಸಾಧಿಸಿ ಮುನ್ನಡೆ ಒದಗಿಸಿದರೆ, ಹೂಡಾ ಅವರು ಅಲಿಸಾ ಕುಲೆಶೋವಾ ವಿರುದ್ಧ 21-7, 21-10 ಹಾಗೂ ತನ್ವಿ ಡಯಾನಾ ನಾಮೆನೋವಾರನ್ನು ಕೇವಲ 19 ನಿಮಿಷಗಳಲ್ಲಿ 21-5, 21-10 ಅಂತರದಿಂದ ಮಣಿಸಿದರು.

ಒಂದು ಗೇಮ್ ಕೈಚೆಲ್ಲದ ಭಾರತವು ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು, ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಜಪಾನ್ ತಂಡವನ್ನು ಮಂಗಳವಾರ ಎದುರಿಸಲಿದೆ. ಸೆಮಿಫೈನಲ್‌ಗೆ ತಲುಪಿದರೆ ಪದಕ ಖಚಿತವಾಗಲಿದೆ.

2014ರ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದ ಭಾರತ ತಂಡವು 2023ರಲ್ಲಿ ಥಾಯ್ಲೆಂಡ್ ವಿರುದ್ಧ ಸೋಲನುಭವಿಸಿ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿತ್ತು.

ಪುರುಷರ ಬ್ಯಾಡ್ಮಿಂಟನ್ ತಂಡವು ಸೋಮವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries